ಬದಿಯಡ್ಕ: ಅಗಲ್ಪಾಡಿ ಶಾಲೆಯಲ್ಲಿ ಜರಗಿದ 61ನೇ ಕುಂಬಳೆ ಉಪಜಿಲ್ಲಾ ಮಟ್ಟದ ವಿವಿಧ ಸ್ಪಧೆರ್Éಗಳಲ್ಲಿ ಭಾಗವಹಿಸಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 9ನೇ ತರಗತಿಯ ವಿದ್ಯಾರ್ಥಿನಿ ಧೃತಿ ಭಟ್ ಕೊರೆಕ್ಕಾನ ಉತ್ತಮ ಸಾಧನೆಗೈದಿರುತ್ತಾಳೆ. ಹಿಂದಿ ಪ್ರಬಂಧ ಹಾಗೂ ಸಂಸ್ಕøತ ಅಷ್ಟಪದಿಯಲ್ಲಿ ಎ ಗ್ರೇಡ್‍ನೊಂದಿಗೆ ಪ್ರಥಮ, ದೇಶಭಕ್ತಿಗಾನ, ಸಂಸ್ಕøತ ಸಮಸ್ಯಾಪೂರಣಂ, ಗಾನಾಲಾಪನಂನಲ್ಲಿ ಎ ಗ್ರೇಡ್‍ನೊಂದಿಗೆ ದ್ವಿತೀಯ, ಸಂಘಗಾನದಲ್ಲಿ ಎ ಗ್ರೇಡ್‍ನೊಂದಿಗೆ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಸಾಧನೆಗೆ ಶಾಲಾ ಆಡಳಿತಮಂಡಳಿ, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ ಅಭಿನಂದನೆಯನ್ನು ಸಲ್ಲಿಸಿದೆ.
ಧೃತಿ ಭಟ್ ಕೊರೆಕ್ಕಾನ ಉತ್ತಮ ಸಾಧನೆ
0
ಡಿಸೆಂಬರ್ 02, 2022
Tags