ಕುಂಬಳೆ: ಯಕ್ಷಗಾನ ರಂಗದ ಅನನ್ಯ ಸಾಧಕ ದಿ. ಕುಂಬ್ಳೆ ಸುಂದರರಾವ್ ಇವರಿಗೆ ‘ನುಡಿನಮನ’ ಕಾರ್ಯಕ್ರಮವು ಕುಂಬಳೆ ಕೃಷ್ಣನಗರದ ಶ್ರೀ ಮೌನೇಶ ಮಂದಿರದಲ್ಲಿ ಜರಗಿತು.
ಹರಿಕಥಾ ಪರಿಷತ್ ಮಂಗಳೂರು ಇದರ ಅಧ್ಯಕ್ಷ ವಕೀಲ ಕೆ.ಮಹಾಬಲ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರು ‘ನುಡಿನಮನ’ ಸಲ್ಲಿಸಿ ಮಾತನಾಡಿದರು. ಕಲಾರತ್ನ ಶಂನಾಡಿಗ ಕುಂಬಳೆ, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ವೀಜಿ ಕಾಸರಗೋಡು, ರವೀಂದ್ರನ್.ವಿ, ಪ್ರೇಮಾವತಿ ಸತೀಶ್, ಪ್ರವೀಣ್ ಕುಮಾರ್ ಕಾಸರಗೋಡು ಮೊದಲಾದವರು ಸುಂದರ ರಾಯರ ಬಗೆಗಿನ ತಮ್ಮ ನೆನಪುಗಳನ್ನು ಹಂಚಿಕೊಂಡರು. ಸುಂದರರಾಯರ ಕುರಿತು ಕಲಾರತ್ನ ಶಂನಾಡಿಗ ಕುಂಬಳೆಯವರು ರಚಿಸಿದ ಭಾವಗಾನವನ್ನು ಕುಮಾರಿ ವೈಭವಿ ಕಾವ್ಯಾಂಜಲಿಯಾಗಿ ಸಮರ್ಪಿಸಿದರು. ಪ್ರಮೋದ್ ಕುಮಾರ್, ಕುಂಬಳೆ ಸ್ವಾಗತಿಸಿ, ವೇಣುಗೋಪಾಲ್ ಶೆಟ್ಟಿ ವಂದಿಸಿದರು.
ಸಭಾಕಾರ್ಯಕ್ರಮದ ಬಳಿಕ ‘ಭರತಾಗಮನ’ ಎಂಬ ವಿಶೇಷ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ವೆಂಕಟರಾಜ್ ಕುಂಟಿಕಾನ, ತಲ್ಪನಾಜೆ ಶಿವಶಂಕರ ಭಟ್, ಚೆಂಡೆ-ಲಕ್ಷ್ಮೀಶ ಬೆಂಗ್ರೋಡಿ, ಮದ್ದಳೆ- ಮುರಳೀಧರ ಶೇಡಿಕಾವು ಮತ್ತು ಮುಮ್ಮೇಳದಲ್ಲಿ ಕುಂಬಳೆ ಶ್ರೀಧರ ರಾವ್, ಪಕಳಕುಂಜೆ ಶ್ಯಾಮ್ ಭಟ್, ವೀಜಿ ಕಾಸರಗೋಡು, ಪ್ರತಾಪ್ ಕುಂಬಳೆ ರಂಜಿಸಿದರು. ಸ್ನೇಹಲತಾ ದಿವಾಕರ್ ಕುಂಬಳೆ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಆಚಾರ್ ಕೃಷ್ಣನಗರ ನಿರ್ವಹಿಸಿದರು.