HEALTH TIPS

ಕೊಲೆ ಪ್ರಕರಣ: ಶ್ರದ್ಧಾ ಮೂಳೆಗಳು ಅಪ್ಪನ ಡಿಎನ್‌ಎಯೊಂದಿಗೆ ಹೊಂದಿಕೆ

 

          ನವದೆಹಲಿ: ಸಹಜೀವನ ನಡೆಸುತ್ತಿದ್ದ ಸಂಗಾತಿಯಿಂದಲೇ ಬರ್ಬರವಾಗಿ ಹತ್ಯೆಗೀಡಾಗಿದ್ದ ಮುಂಬೈ ಮೂಲದ ಕಾಲ್‌ಸೆಂಟರ್‌ ಉದ್ಯೋಗಿ ಶ್ರದ್ಧಾ ವಾಲಕರ್‌ ಅವರ ಮೂಳೆಯ ತುಂಡುಗಳು ಇಲ್ಲಿನ ಮಹರೌಲಿ ಅರಣ್ಯ ಪ್ರದೇಶದಲ್ಲಿ ದೊರೆತಿದ್ದು, ಅವುಗಳು ಶ್ರದ್ಧಾ ಅವರ ಅಪ್ಪನ ಡಿಎನ್‌ಎ ಮಾದರಿಗೆ ಹೊಂದಿಕೆಯಾಗುತ್ತಿವೆ ಎಂದು ದೆಹಲಿ ಪೊಲೀಸ್‌ ಮೂಲಗಳು ಗುರುವಾರ ತಿಳಿಸಿವೆ.

                'ಶ್ರದ್ಧಾ ಅವರ ದೇಹದ ಭಾಗಗಳ ಹುಡುಕಾಟದಲ್ಲಿದ್ದ ಪೊಲೀಸರಿಗೆ ಒಟ್ಟು 13 ಮೂಳೆಯ ತುಂಡುಗಳು ದೊರೆತಿವೆ. ಅವುಗಳನ್ನು ಡಿಎನ್‌ಎ ಪರೀಕ್ಷೆಗಾಗಿ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಅದರ ವರದಿ ಪೊಲೀಸರ ಕೈಸೇರಿದೆ. ಈ ಮೂಳೆಗಳ ಡಿಎನ್‌ಎಯು ಶ್ರದ್ಧಾ ಅವರ ತಂದೆ ವಿಕಾಸ್‌ ವಾಲಕರ್‌ ಅವರ ಡಿಎನ್‌ಎಗೆ ಹೊಂದಿಕೆಯಾಗುತ್ತಿವೆ' ಎಂದು ಮಾಹಿತಿ ನೀಡಿವೆ.


                ಮುಂಬೈ ಮೂಲದ ಅಫ್ತಾಬ್ ಪೂನವಾಲಾ ಎಂಬಾತ ಮೇ 18ರಂದು 26 ವರ್ಷದ ಶ್ರದ್ಧಾ ಎಂಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ್ದ. ಬಳಿಕ ಪೊಲೀಸರ ಕಣ್ಣು ತಪ್ಪಿಸಲು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ಮೆಹರೌಲಿ ಅರಣ್ಯದಲ್ಲಿ ಎಸೆದಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್‌ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

DNA from recovered bones match with Shraddha Walkar's father; police to address media soon Read @ANI Story | aninews.in/news/national/
Image

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries