ಕಾಸರಗೋಡು: ರಾಜ್ಯದ ರೈತರಿಗೆ ಕೃಷಿ ಕ್ಷೇತ್ರದಲ್ಲಿನ ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆಯಲು ಹಾಗೂ ಈ ತಂತ್ರಜ್ಞಾನಗಳನ್ನು ತಮ್ಮ ಹೊಲಗಳಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಇಸ್ರೇಲ್‍ಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ರೈತರು ಎ ಐ ಐ ಎಂ ಎಸ್ ನಪೆÇೀರ್ಟಲ್ www.aimnsew.kerala.gov.in (ಎ ಐ ಎಂ ಎಸ್ 2.0) ಮೂಲಕ ಡಿಸೆಂಬರ್ 29 ರ ಮೊದಲು ಅರ್ಜಿ ಸಲ್ಲಿಸಬೇಕು. 10 ವರ್ಷಕ್ಕಿಂತ ಹೆಚ್ಚಿನ ಕೃಷಿ ಅನುಭವ ಮತ್ತು ಒಂದು ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರಗತಿಪರ ಕೃಷಿಕರನ್ನು ಅಧ್ಯಯನ ಪ್ರವಾಸಕ್ಕೆ ಆಯ್ಕೆ ಮಾಡಲಾಗುತ್ತದೆ. ಆದ್ಯತೆಯ ಇತರ ಮಾನದಂಡಗಳು ಮತ್ತು ನಿಯಮಗಳು ವೆಬ್‍ಸೈಟ್‍ನಲ್ಲಿ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ವ್ಯಾಪ್ತಿಯ ಕೃಷಿ ಭವನವನ್ನು ಸಂಪರ್ಕಿಸುವಂತೆ ಪ್ರಧಾನ ಕೃಷಿ ಅಧಿಕಾರಿ ತಿಳಿಸಿದ್ದಾರೆ. ದೂರವಾಣಿ 04994 255346.
ಕೇರಳದ ರೈತರಿಗೆ ಇಸ್ರೇಲ್‍ಗೆ ಭೇಟಿ ನೀಡಿ ಕೃಷಿ ಕಲಿಯುವ ಅವಕಾಶ
0
ಡಿಸೆಂಬರ್ 28, 2022
Tags