ಸಾಮಾಜಿಕ ಹಾಗೂ ಸಾಂಸ್ಕøತಿಕ ಸಂಘಟನೆ ಕೊಕ್ಕೆಜಾಲ್ ಲಿಟ್ಲ್ ಬ್ರದರ್ಸ್ ವತಿಯಿಂದ 'ಕ್ರಿಸ್ಮಸ್ ಫೀಸ್ಟ' ಕಾರ್ಯಕ್ರಮ ಕೊಕ್ಕೆಜಾಲ್ ಜಂಕ್ಷನ್‍ನಲ್ಲಿ ನಡೆಯಿತು. ಸಭಾಕಾರ್ಯಕ್ರಮದಲ್ಲಿ ಕಯ್ಯಾರ್ ಕ್ರಿಸ್ತರಾಜದೇವಾಲಯದ ಧರ್ಮಗುರು ವಂದನೀಯ ಹ್ಯಾರಿ ಡಿ. ಸೋಜ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೀಯಪದವು ವಾಣಿವಿಜಯ ಎ ಯು ಪಿ ಶಾಲಾ ಶಿಕ್ಷಕ ಹರೀಶ್ ಸುಲೆಯಾ, ಕೊಕ್ಕೆಜಾಲ್ ವಫಿಕಾಲೇಜಿನ ಪ್ರಾಂಶುಪಾಲ ಎಂ . ಎಸ್ . ಖಾಲಿದ್ ಬಾಖವಿ, ಕಯ್ಯಾರ್ ವಿಜಯ ಜೇಸುರಾಜ್ ಕಾನ್ವಂಟ್‍ನ ಸುಪೀರಿಯರ್ ಸಿಸ್ಟರ್ ಜಾಸ್ಮಿನ್‍ಲೂವಿಸ್ , ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯ ಅವಿನಾಶ್‍ಮಚಾದೊ , ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಪಾಲನಾ ಸಮಿತಿ ಉಪಾಧ್ಯಕ್ಷ ಜೋರ್ಜ್‍ಡಿಅಲ್ಮೇಡಾ , ಕಾರ್ಯದರ್ಶಿ ಝೀನಾ ಡಿ ಸೋಜ ಉಪಸ್ಥಿತರಿದ್ದರು. ¸ಈ ಸಂದರ್ಭ ವಿವಿಧ ವಲಯಗಳಲ್ಲಿ ಸಾಧನೆಗೈದ ಜೈಸನ್ ಒವರ್ ಡಿ ಸೋಜ , ಯೋಗೀಶ್ ಕುಮಾರ್ ಹಾಗೂ ಅಬ್ದುಲ್ ರಹಮಾನ್ ಕೊಕ್ಕೆಜಾಲ್ ಅವರನ್ನು ಸನ್ಮಾನಿಸಲಾಯಿತು. ಲಿಟ್ಲ್ ಬ್ರದರ್ಸ್ £ ಅಧ್ಯಕ್ಷ ಜೂಲಿಂiÀನ ಕ್ರಾಸ್ತಸ್ವಾಗತಿಸಿದರು. ಜೋರ್ಜ್ ಕ್ರಾಸ್ತ, ಜೋಸ್ಟಲ್ ಡಿ ಸೋಜ ,ಸುನಿತಾ ಡಿ ಸೋಜ , ವಿನೋದ್ ಡಿ ಸೋಜ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ 'ಲೇಲೆ ಪಾಡಡೆ'ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನ ಗೊಂಡಿತು.
ಕೊಕ್ಕೆಜಾಲ್ ನಲ್ಲಿ ಸಂಭ್ರಮದ 'ಕ್ರಿಸ್ಮಸ್ ಫೀಸ್ಟ' ಕಾರ್ಯಕ್ರಮ
0
ಡಿಸೆಂಬರ್ 27, 2022