ಕೊಯಿಕ್ಕೋಡ್: ಸರಿಯಾದ ಸಮಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ 15 ವರ್ಷದ ಬಾಲಕನ ಮರ್ಮಾಂಗದಲ್ಲಿ ಸಿಲುಕಿಕೊಂಡಿದ್ದ ಸ್ಟೀಲ್ ರಿಂಗ್ ಅನ್ನು ಹೊರ ತೆಗೆಯುವ ಮೂಲಕ ಆತನ ಪ್ರಾಣ ಕಾಪಾಡಿರುವ ಘಟನೆ ಕೇರಳದ ಕೊಯಿಕ್ಕೋಡ್ನಲ್ಲಿ ನಡೆದಿದೆ.
ಕೇರಳದ ಫೆರೊಕೆ ಮೂಲದ ಬಾಲಕ ಭಾನುವಾರ ಬೆಳಗ್ಗೆ ಕೊಯಿಕ್ಕೋಡ್ ಮೆಡಿಕಲ್ ಕಾಲೇಜು ಹಾಸ್ಪಿಟಲ್ಗೆ ದಾಖಲಾಗಿದ್ದ. ತಕ್ಷಣ ವೈದ್ಯರು ವೆಲ್ಲಿಮಡುಕುನ್ನುವಿನಲ್ಲಿರುವ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ವೈದ್ಯರ ಸಹಾಯದಿಂದ ವಿಶೇಷವಾಗಿ ಹೊಂದಿಕೊಳ್ಳುವ ಮತ್ತು ಮೃಧು ಗ್ರೈಂಡರ್ ಬಳಸಿ ಸ್ಟೀಲ್ ರಿಂಗ್ ಅನ್ನು ಕತ್ತರಿಸುವ ಮೂಲಕ ಬಾಲಕನ ಪ್ರಾಣ ಉಳಿಸಿದ್ದಾರೆ.