ತಿರುವನಂತಪುರಂ: ಇನ್ನು ಮುಂದೆ ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಮಹಿಳಾ ಕಂಡಕ್ಟರ್‍ಗಳ ಸೀಟಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಮಾತ್ರ ಅವಕಾಶ.
ಪುರುಷರ ಪ್ರಯಾಣಿಕರಿಂದ ಆಸನದಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ ಎಂದು ಮಹಿಳಾ ಕಂಡಕ್ಟರ್‍ಗಳು ದೂರಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಎರಡು ವರ್ಷಗಳ ಹಿಂದೆಯೇ ಆದೇಶ ಹೊರಡಿಸಿದ್ದರೂ ಈಗ ಬಸ್ ಗಳಲ್ಲಿ ಈ ಬಗೆಗಿನ ಪೋಸ್ಟರ್ ಗಳನ್ನು ಹಾಕಲಾಗುತ್ತಿದೆ. ಕಂಡಕ್ಟರ್‍ಗಳಿಗೆ ಬಸ್‍ಗಳಲ್ಲಿ ಬಾಗಿಲ ಬಳಿಯೇ ಆಸನವನ್ನು ನಿಗದಿಪಡಿಸಲಾಗಿದ್ದು, ಇಬ್ಬರಿಗೆ ಪ್ರಯಾಣಿಸಬಹುದಾಗಿದೆ. ತಮ್ಮ ಜೊತೆಗೆ ಕುಳಿತುಕೊಳ್ಳುವ ಕೆಲವು ಪುರುಷ ಪ್ರಯಾಣಿಕರಿಂದ ಕೆಲವೊಮ್ಮೆ ಕೆಟ್ಟ ಅನುಭವವಾಗಿದೆ ಎಂದು ಮಹಿಳಾ ಕಂಡಕ್ಟರ್‍ಗಳು ದೂರಿದ್ದಾರೆ.
ಆದರೆ ಕೆ ಎಸ್ ಆರ್ ಟಿ ಸಿ ಯ ನಿರ್ಧಾರ ಅಸಂಸ್ಕøತವಾಗಿದೆ ಎಂಬ ಆರೋಪ ಬಲವಾಗುತ್ತಿದೆ. ಮಹಿಳೆಯರ ಸುರಕ್ಷತೆಗಾಗಿ ಈ ಕ್ರಮ ಎಂಬ ಅಧಿಕಾರಿಗಳ ಹೇಳಿಕೆಯನ್ನು ಜನ ತಿರಸ್ಕರಿಸುತ್ತಿದ್ದಾರೆ.
ಕೆಟ್ಟ ಅನುಭವ: ಕೆ.ಎಸ್.ಆರ್.ಟಿ.ಸಿ.ಯಲ್ಲಿ ಮಹಿಳಾ ಕಂಡಕ್ಟರ್‍ಗಳ ಸೀಟಿನಲ್ಲಿ ಇನ್ನು ಮಹಿಳಾ ಪ್ರಯಾಣಿಕರು ಮಾತ್ರ
0
ಡಿಸೆಂಬರ್ 04, 2022