HEALTH TIPS

ಪತ್ನಿ ಜೊತೆ ಜಗಳವಾಡಿ ಇಬ್ಬರು ಮಕ್ಕಳ ಸಮೇತ ಬಾವಿಗೆ ಹಾರಿ ಪ್ರಾಣ ಬಿಟ್ಟ ಪತಿ

 

             ತ್ರಿಸ್ಸೂರ್​: ಹೆಂಡತಿ ಜೊತೆ ಜಗಳವಾಡಿದ ವ್ಯಕ್ತಿಯೊಬ್ಬ ತನ್ನಿಬ್ಬರು ಮಕ್ಕಳು ಸಮೇತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕೇರಳದ ತ್ರಿಸ್ಸೂರ್​ನಲ್ಲಿ ನಡೆದಿದೆ. ಅದೃಷ್ಟವಶಾತ್ ಸ್ಥಳೀಯರು ಹಾಗೂ ಸಂಬಂಧಿಕರ ನೆರವಿನಿಂದ​ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

                 ಈ ಘಟನೆ ತ್ರಿಸ್ಸೂರ್​ನ ಮೂನುಪೀಡಿಕಾ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 5.30ರಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಶಿಹಾಬ್​ (35) ಎಂದು ಗುರುತಿಸಲಾಗಿದೆ. ಹಣಕಾಸು ವಿಚಾರವಾಗಿ ಗಂಡ ಮತ್ತು ಹೆಂಡತಿಯ ನಡುವೆ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ. ಜಗಳದಿಂದ ತೀವ್ರವಾಗಿ ಮನನೊಂದಿದ್ದ ಶಿಹಾಬ್​, ತನ್ನ ಎರಡೂವರೆ ಹಾಗೂ ನಾಲ್ಕೂವರೆ ವರ್ಷದ ಇಬ್ಬರು ಮಕ್ಕಳ ಸಮೇತ ಮನೆಯ ಸಮೀಪದಲ್ಲೇ ಇದ್ದ ಬಾವಿಗೆ ಹಾರಿದನು.

                 ಬಾವಿಗೆ ಹಾರಿದ ಕೂಡಲೇ ಸ್ಥಳೀಯರು ಮತ್ತು ಸಂಬಂಧಿಕರು ರಕ್ಷಣೆಗೆ ಧಾವಿಸಿ ಮಕ್ಕಳಿಬ್ಬರನ್ನು ರಕ್ಷಿಸಿದರು. ಆದರೆ, ಶಿಹಾಬ್​ ಮೇಲೆತ್ತಲು ಸಾಧ್ಯವಾಗಲಿಲ್ಲ. ಘಟನೆಯ ಬೆನ್ನಲ್ಲೇ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಿಹಾಬ್​ನನ್ನು ಬಾವಿಯಿಂದ ಹೊರ ತೆಗೆದು, ಕೊಡುಂಗಲ್ಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದಾದರೂ ಆತ ಬದುಕುಳಿಯಲಿಲ್ಲ.

            ಶಿಹಾಬ್​ ಅವರು ಚೆಂಥ್ರಪಿನಿಯಲ್ಲಿ ಟೈಲ್​ ಶಾಪ್​ ಒಂದನ್ನು ನಡೆಸುತ್ತಿದ್ದರು. ಜೀವನದಲ್ಲಿ ಯಾವುದೇ ಗಂಭೀರವಾದ ತೊಂದರೆ ಇರಲಿಲ್ಲ ಎಂದು ಹೇಳಲಾಗಿದೆ. ಆದರೂ ಶಿಹಾಬ್​ ಇಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬುವುದು ತನಿಖೆಯಿಂದ ತಿಳಿದುಬರಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries