ಮಂಜೇಶ್ವರ: ತೊಟ್ಟೆತ್ತೋಡಿ- ಬ್ರಹ್ಮರಕಟ್ಟೆ ವಿಸಿಬಿ ಮತ್ತು ಕಿರು ಸೇತುವೆ ಉದ್ಘಾಟನೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಮಂಗಳವಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ. ರಾಧಾಕೃಷ್ಣ, ಪಂಚಾಯತಿ ಸದಸ್ಯರಾದ ಚಂದ್ರಶೇಖರ ಕೋಡಿ, ಕುಸುಮ, ಸರಸ್ವತಿ ಭಾಗವಹಿಸಿದ್ದರು.
ಶಮೀನಾ ಟೀಚರ್ ಹಾಗೂ ಕೆ.ವಿ ರಾಧಾಕೃಷ್ಣ ಇವರನ್ನು ಶಾಲು ಮತ್ತು ಹಣ್ಣುಹಂಪಲು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಈ ಭಾಗದ ಎಲ್ಲಾ ಗಣ್ಯರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು. ಡಾ.ಜಯಪ್ರಕಾಶ್ ನಾರಾಯಣ ಸ್ವಾಗತಿಸಿ, ಟಿ. ಡಿ. ಸದಾಶಿವ ರಾವ್ ವಂದಿಸಿದರು. ಅಶ್ವಿನ್ ಕಲ್ಲಗದ್ದೆ ಕಾರ್ಯಕ್ರಮ ನಿರ್ವಹಿಸಿದರು.
ತೊಟ್ಟೆತ್ತೋಡಿ- ಬ್ರಹ್ಮರಕಟ್ಟೆ ವಿಸಿಬಿ ಮತ್ತು ಕಿರು ಸೇತುವೆ ಉದ್ಘಾಟನೆ
0
ಡಿಸೆಂಬರ್ 13, 2022
Tags