ಪೆರ್ಲ: ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ಇದರ ಆಶ್ರಯದಲ್ಲಿ ಸಾಹಿತಿ,ಸಂಘಟಕ ಸುಂದರ ಬಾರಡ್ಕ ಅವರ 50ನೇ ಜನ್ಮ ವμರ್Áಚರಣೆಯ ಅಂಗವಾಗಿ ‘ಸುಂದರ ಸುವರ್ಣ ಸಂಭ್ರಮ’ ಕಾರ್ಯಕ್ರಮ ಡಿ.10ಕ್ಕೆ ಹಮ್ಮಿಕೊಂಡಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಹಿರಿಯ ಜನಪದ ಕಾಂತಗ ವಾದಕ ಚೋಮ ಕಾಟುಕುಕ್ಕೆ ಅವರು ಬಿಡಗಡೆಗೊಳಿಸಿದರು. ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ, ಕೃಷ್ಣ ಡಿ.ದರ್ಬೆತ್ತಡ್ಕ,ರಿತೇಶ್ ಕಿರಣ್ ಕಾಟುಕುಕ್ಕೆ ಮೊದಲಾದವರು ಉಪಸ್ಥಿತರಿದ್ದರು.
ಡಿ.10ರಂದು ಬದಿಯಡ್ಕದ ಸಂಸ್ಕøತಿ ಭವನದಲ್ಲಿ ನಡೆಯುವ ಕಾರ್ಯಕ್ರಮವನ್ನು ಬೆಳಿಗ್ಗೆ 10 ಗಂಟೆಗೆ ಹಿರಿಯ ಸಾಹಿತಿ,ಮಾಧ್ಯಮ ತಜ್ಞ ಮಲಾರ್ ಜಯರಾಮ ರೈ ಉದ್ಘಾಟಿಸುವರು. ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಅಧ್ಯಕ್ಷತೆವಹಿಸುವರು. ಕೇರಳ ತುಳು ಅಕಾಡೆಮಿ ಸದಸ್ಯ ರವೀಂದ್ರ ಆನೆಮಜಲ್, ಪತ್ರಕರ್ತ ಶ್ರೀರಾಮ ದಿವಾಣ, ರಾಮಕೃಷ್ಣನ್ ಮೊನಾಚ, ನಿವೃತ್ತ ಎಸ್.ಐ.ಪರಮೇಶ್ವರ ನಾಯ್ಕ್ ಮೊದಲಾದವರು ಸಭೆಯಲ್ಲಿ ಭಾಗವಹಿಸುವರು. ಬಳಿಕ 11 ರಿಂದ ಸುಂದರ ಬಾರಡ್ಕ ಅವರ ಸಾಹಿತ್ಯ ಪ್ರಕಾರಗಳ ವಿಚಾರಗೋಷ್ಠಿ ಜರಗಲಿದೆ. ಕಾವ್ಯದ ಬಗ್ಗೆ ದಿವ್ಯಗಂಗಾ ಪಿ, ಕತೆ ಬಗ್ಗೆ ಸ್ನೇಹಲತಾ ದಿವಾಕರ್, ಜನಪದ ಚಿಕಿತ್ಸಾ ಬರಹ ಬಗ್ಗೆ ರಾಜಶ್ರೀ ಟಿ.ರೈ, ಸಂಶೋಧನಾ ಬರಹ ಬಗ್ಗೆ ಕವಿತಾ ಕೂಡ್ಲು ವಿಷಯ ಮಂಡಿಸುವರು. ಮಧ್ಯಾಹ್ನ 12 ರಿಂದ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ಬಾಲಕೃಷ್ಣ ಬೇರಿಕೆ ಅಧ್ಯಕ್ಷತೆವಹಿಸುವರು. ಬಹು ಭಾಷಾ ಕವಿಗಳು ಭಾಗವಹಿಸುವರು. ಮಧ್ಯಾಹ್ನ 1.30 ರಿಂದ ಸುಂದರ ಬಾರಡ್ಕ ಅವರ ಜತೆ ಸಂವಾದ ನಡೆಯಲಿದೆ.ವಿಶಾಲಾಕ್ಷ ಪುತ್ರಕಳ ಸಮನ್ವಯಗಾರರಾಗಿ ಪಾಲ್ಗೊಳ್ಳುವರು. 2.30ರಿಂದ ಜರಗುವ ಅಭಿನಂದನಾ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸುಂದರ ಬಾರಡ್ಕ ಅವರನ್ನು ಅಭಿನಂದಿಸಲಾಗುವುದು. ಡಾ.ಶ್ರೀನಿಧಿ ಸರಳಾಯ ಸಭೆಯ ಅಧ್ಯಕ್ಷತೆವಹಿಸಲಿದ್ದು ಕವಿ,ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅಭಿನಂದನಾ ಭಾಷಣಗೈಯುವರು. ಜಾನಪದ ವಿದ್ವಾಂಸ ಪಾಂಗಾಳ ಬಾಬು ಕೊರಗ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಡಾ.ರಾಜೇಶ್ ಆಳ್ವ, ನಾರಾಯಣ ಬಾರಡ್ಕ, ದಿವ್ಯಾ ಗಟ್ಟಿ ಪರಕ್ಕಿಲ,ಸುಜಾತ ಮಾಣಿಮೂಲೆ,ಸುಜಾತ ಕನಿಯಾಲ ಮೊದಲಾದವರು ಪಾಲ್ಗೊಳ್ಳುವರು.
ಬದಿಯಡ್ಕದಲ್ಲಿ ಸುಂದರ ಸುವರ್ಣ ಸಂಭ್ರಮ: ಆಮಂತ್ರಣ ಪತ್ರಿಕೆ ಬಿಡುಗಡೆ
0
ಡಿಸೆಂಬರ್ 06, 2022
Tags