ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತಿ ಹಾಗೂ ಕುಟುಂಬ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಆರೋಗ್ಯ ಜಾಗೃತಿ ರ್ಯಾಲಿ ನಡೆಯಿತು. ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಮುಕ್ತಾಯಗೊಂಡ ರ್ಯಾಲಿಯಲ್ಲಿ ಅಗಲ್ಪಾಡಿ ಹೈಯರ್ ಸೆಕೆಂಡರಿ ಶಾಲೆಯ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಶಿಕ್ಷಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ ಧ್ವಜಾರೋಹಣ ಮಾಡಿದರು. ಪಂಚಾಯಿತಿ ಸದಸ್ಯ ಹರೀಶ ಗೋಸಾಡ, ಸುಹಾರಾ ಭಾಗವಹಿಸಿದ್ದರು. ವೈದ್ಯಾಧಿಕಾರಿ ಡಾ.ಸೈಯದ್ ಹಮೀದ್ ಶುಹೈಬ್ ಏಡ್ಸ್ ಜಾಗೃತಿ ತರಗತಿ ನಡೆಸಿ ಪ್ರತಿಜ್ಞಾವಿಧಿ ಭಾಷಣ ಮಾಡಿದರು.
ಕುಂಬ್ಡಾಜೆಯಲ್ಲಿ ಏಡ್ಸ್ ಜಾಗೃತಿ ಜಾಥಾ
0
ಡಿಸೆಂಬರ್ 04, 2022
Tags