HEALTH TIPS

ಸಂಸತ್‌ನ ಚಳಿಗಾಲ ಅಧಿವೇಶನ: ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳೇ ವಿಪಕ್ಷ ಅಸ್ತ್ರ

 

            ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ.

                ಪ್ರಸಕ್ತ ಚಳಿಗಾಲದ ಅಧಿವೇಶನದ ಅಂಗವಾಗಿ ಸೋಮವಾರದಿಂದ ಎರಡು ದಿನ ಧನವಿನಿಯೋಗ ಮಸೂದೆ ಮೇಲೆ ಚರ್ಚೆ ನಡೆಯಲಿದೆ, ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.

                   ಸರ್ಕಾರವು, ಕ್ರಿಸ್‌ಮಸ್‌ಗೂ ಮುನ್ನವೇ ಅಧಿವೇಶನವನ್ನು ಮೊಟಕುಗೊಳಿಸುವ ಸಾಧ್ಯತೆ ಇದೆ. ಈ ಕಾರಣಕ್ಕೆ, ಸಂಸತ್‌ನ ಎರಡೂ ಸದನಗಳಲ್ಲಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲು, ಚರ್ಚೆ ನಡೆಸಲು ಸಮಯವೇ ಸಿಗುವುದಿಲ್ಲ. ಹೀಗಾಗಿ, ವಿಪಕ್ಷಗಳು ಈ ಎರಡು ದಿನಗಳ ಕಾಲ ಆಕ್ರಮಣಕಾರಿ ವಿಧಾನಕ್ಕೆ ಮೊರೆ ಹೋಗುವ ಸಾಧ್ಯತೆಗಳೇ ಹೆಚ್ಚು ಎಂದು ಮೂಲಗಳು ಹೇಳಿವೆ.

                ಕಳೆದ ವಾರ ನಡೆದ ಕಲಾಪಗಳಲ್ಲಿ, ಚೀನಾ-ಭಾರತ ಸೈನಿಕ ನಡುವಿನ ಸಂಘರ್ಷವೇ ಪ್ರತಿಧ್ವನಿಸಿತ್ತು. ಇದರಿಂದಾಗಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಆಹಾರ ಭದ್ರತೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶವೇ ಸಿಕ್ಕಿರಲಿಲ್ಲ.

                   ಧನವಿನಿಯೋಗ ಮಸೂದೆ ಮೇಲಿನ ಚರ್ಚೆಗೆ ಸಂಬಂಧಿಸಿ ತಮ್ಮ ಕಾರ್ಯತಂತ್ರ ಹೇಗಿರಬೇಕು ಎಂಬ ಬಗ್ಗೆ ವಿರೋಧ ಪಕ್ಷಗಳ ನಡುವೆ ಈಗಾಗಲೇ ಔಪಚಾರಿಕ ಸಮಾಲೋಚನೆಗಳು ನಡೆದಿವೆ.

            'ವಿರೋಧ ಪಕ್ಷಗಳು, ಅದರಲ್ಲೂ ನಮ್ಮ ಪಕ್ಷವು ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಲ್ಲದೇ, ನರೇಗಾದ ಅಸಮರ್ಪಕ ಅನುಷ್ಠಾನವನ್ನು ಪ್ರಸ್ತಾಪಿಸಲಿದೆ' ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಸಚೇತಕರಾಗಿರುವ ನಾಸಿರ್‌ ಹುಸೇನ್‌ 'ಪ್ರಜಾವಾಣಿ'ಗೆ ತಿಳಿಸಿದರು.

               ಗಡಿಯಲ್ಲಿ ಪದೇಪದೇ ಸಂಘರ್ಷ ನಡೆಸುತ್ತಿರುವ ಚೀನಾ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿಯಬೇಕು ಎಂದು ಕಾಂಗ್ರೆಸ್‌ ಭಾನುವಾರ ಆಗ್ರಹಿಸಿದೆ. ಅಲ್ಲದೇ, 'ಚೀನಾದ ಆಕ್ರಮಣ ಕುರಿತ ಚರ್ಚೆಯಿಂದ ಪಲಾಯನ ಮಾಡುತ್ತಿರುವ ದೇಶದ ಮೊದಲ ಪ್ರಧಾನಿ ಮೋದಿ' ಎಂದೂ ಟೀಕಿಸಿದೆ.

                ಈ ವಿಷಯಕ್ಕೆ ಸಂಬಂಧಿಸಿ, 'ಚೀನ್‌ ಪರ್ ಛುಪ್ಪಿ ತೋಡೊ, ಭಾರತ್‌ ಜೋಡೊ' (ಚೀನಾ ಕುರಿತು ಮೌನ ಮುರಿಯಿರಿ, ಭಾರತ ಒಗ್ಗೂಡಿಸಿ) ಎಂಬ ಹೊಸ ಘೋಷವಾಕ್ಯವನ್ನೂ ಕಾಂಗ್ರೆಸ್‌ ಹರಿಬಿಟ್ಟಿದೆ.

              'ಚೀನಾ ವಿದ್ಯಮಾನ ಕುರಿತು ಸಂಸದರು ಎತ್ತುವ ಪ್ರಶ್ನೆಗಳಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಥವಾ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಉತ್ತರಿಸಬಾರದು. ಈ ಕುರಿತು ಮೋದಿ ಅವರೇ ಉತ್ತರಿಸಬೇಕು' ಎಂಬುದು ಕಾಂಗ್ರೆಸ್‌ನ ಪ್ರತಿಪಾದನೆ.

              'ವೀರ ಸೇನಾ, ಕಾಯರ್ ರಾಜಾ' (ವೀರ ಸೇನೆ, ಹೇಡಿ ರಾಜಾ) ಎಂಬಂತಾಗಿದೆ' ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ ಖೇರಾ ಟೀಕಿಸಿದ್ದಾರೆ.

             ರಾಜಸ್ಥಾನದ ದೌಸಾದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌, 'ಚೀನಾದಿಂದ ಭಾರತ ಬಹುದೊಡ್ಡ ಸವಾಲನ್ನು ಎದುರಿಸುತ್ತಿದೆ. ಈ ಬಗ್ಗೆ ಸಂಸತ್‌ನಲ್ಲಿ ವಿಸ್ತೃತ ಚರ್ಚೆ ಅಗತ್ಯ' ಎಂದಿದ್ದಾರೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries