ಚೆನ್ನೈ: ತಮಿಳುನಾಡಿನಲ್ಲಿ ಡಿಸೆಂಬರ್ 8 ರಂದು ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಆರು ತಂಡಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ.
ನಾಗಪಟ್ಟಣಂ, ತಾಂಜಾವೂರು, ತಿರುವರೂರು, ಕಡಲೂರು, ಮಯಿಲಾಡುಥುರೈ ಮತ್ತು ಚೆನ್ನೈನಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗುತ್ತದೆ. ಈ ಸಂಬಂಧ ಎಎನ್‌ಐ ಟ್ವೀಟ್ ಮಾಡಿದೆ.
ದಕ್ಷಿಣ ಅಂಡಮಾನ್ ಸಾಗರದಲ್ಲಿ ಕಡಿಮೆ ಒತ್ತಡ ರೂಪುಗೊಂಡಿದೆ. ಇದು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸಿ, ಅಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಕ್ಕೆ ಕಾರಣವಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ತಮಿಳುನಾಡಿನ ವಿಪತ್ತು ನಿರ್ವಹಣಾ ನಿರ್ದೇಶಕರ ವಿನಂತಿಯಂತೆ ಎನ್‌ಡಿಆರ್‌ಎಫ್‌ನ ಆರು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
TN | 6 teams from NDRF Arakkonam detailed to Nagapattinam,Thanjavur,Thiruvarur,Cuddalore, Mayiladuthurai&Chennai in view of IMD alert with respect to low pressure over South Andaman Sea. It's likely to move West-northwest wards&concentrate into a depression over SE Bay of Bengal.