ಕಾಸರಗೋಡು: ರಬ್ಬರ್ ಬೋರ್ಡ್‍ನ ಪ್ಲಾಂಟೇಶನ್ ಕಾರ್ಮಿಕರಿಗೆ ಗ್ರೂಪ್ ಲೈಫ್ ಇನ್ಶೂರೆನ್ಸ್ ಕಮ್ ಟರ್ಮಿನಲ್ ಬೆನಿಫಿಟ್ ಸ್ಕೀಮ್‍ನಲ್ಲಿ ಹೊಸ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. 18 ರಿಂದ 59 ವರ್ಷದೊಳಗಿನವರು ಯೋಜನೆಯ ಸದಸ್ಯರಾಗಬಹುದು.
0.40 ಹೆಕ್ಟೇರ್ ಪ್ರದೇಶದಲ್ಲಿ ಕನಿಷ್ಠ 150 ಮರಗಳನ್ನು ಟ್ಯಾಪ್ ಮಾಡುವವರಿಗೆ ಯೋಜನೆಗೆ ಸೇರಬಹುದಾಗಿದೆ. ಈ ಯೋಜನೆಯು ಒಂದು ಹೆಕ್ಟೇರ್‍ಗಿಂತ ಕಡಿಮೆ ತೋಟವಿರುವ ರೈನ್ ಗಾರ್ಡ್ ಅಳವಡಿಸಿದ ತೋಟಗಳನ್ನು ಸಹ ಯೋಜನೆಗೆ ಸೇರಿಕೊಳ್ಳಬಹುದು. ಹತ್ತಿರದ ಪ್ರಾದೇಶಿಕ ಕಚೇರಿಯಲ್ಲಿ ಅರ್ಜಿಯೊಂದಿಗೆ ಕನಿಷ್ಠ 300 ರೂ ಪ್ರೀಮಿಯಂ ಪಾವತಿಸುವ ಮೂಲಕ ಯೋಜನೆಗೆ ಸೇರ್ಪಡೆಯಗಬಹುದಾಗಿದೆ. ನಂತರದ ಎಲ್ಲ ವರ್ಷಗಳಲ್ಲಿ ತಲಾ ರೂ 300 ಪಾವತಿಸುವ ಮೂಲಕ 75 ವರ್ಷ ವಯಸ್ಸಿನವರೆಗೆ ಯೋಜನೆಯನ್ನು ಮುಂದುವರಿಸಬಹುದು. ಸರಿಯಾಗಿ ನವೀಕರಿಸಿದವರಿಗೆ ಬೋರ್ಡ್ ತಲಾ 600 ರೂ. ಪಾವತಿಸಲಿದೆ. ನೈಸರ್ಗಿಕ ಮತ್ತು ಆಕಸ್ಮಿಕ ಸಾವಿಗೆ 80000 ರಿಂದ 180000 ರೂಪಾಯಿ ವರೆಗಿನ ಸವಲತ್ತು ಲಭಿಸಲಿದೆ. ಅಪಘಾತದಿಂದ ಕೈಕಾಲು ಕಳೆದುಕೊಂಡರೆ 100000 ರೂ.ವರೆಗೆ ಪಡೆಯಬಹುದು. ವಿಮಾ ಕಂಪನಿಯು ಯೋಜನೆಯ ಕೊನೆಯಲ್ಲಿ ಅಥವಾ 60 ವರ್ಷಗಳ ನಂತರ ಪಾವತಿಸಬೇಕಾದ ಮೊತ್ತದ ಮೇಲೆ ಆನುಪಾತಿಕ ಮೊತ್ತವನ್ನು ಪಾವತಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ರಬ್ಬರ್ ಕಾರ್ಮಿಕರ ಜನಗಣತಿ:
ಹೊಸದುರ್ಗ ಮತ್ತು ವೆಳ್ಳರಿಕುಂಡ್ ತಾಲೂಕುಗಳಲ್ಲಿ ರಾಷ್ಟ್ರೀಯ ರಬ್ಬರ್ ಗಣತಿ ಅನ್ವಯ ರಬ್ಬರ್ ಕೃಷಿಕರು ಮತ್ತು ಟ್ಯಾಪಿಂಗ್ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ರಬ್ಬರ್ ಕ್ರಷಿಕರು ಮತ್ತು ಟ್ಯಾಪಿಂಗ್ ಕಾರ್ಮಿಕರಿಗೆ ಯೋಜನೆಗಳನ್ನು ರಚಿಸಲು ಗಣತಿ ನಡೆಸಲಾಗುತ್ತಿದೆ. ರೈತರ ಬಳಿಗೆ ಬರುವ ಗಣತಿದಾರರಿಗೆ ನಿಖರ ಮತ್ತು ಸತ್ಯದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಕಾಞಂಗಾಡ್ ಉಪ ರಬ್ಬರ್ ಉತ್ಪಾದನಾ ಆಯುಕ್ತರು ತಿಳಿಸಿದ್ದಾರೆ.
ಗುಂಪು ಜೀವ ವಿಮಾ ಯೋಜನೆಗೆ ಸೇರ್ಪಡೆಗೆ ಅವಕಾಶ
0
ಡಿಸೆಂಬರ್ 24, 2022
Tags