ಬದಿಯಡ್ಕ: ಏತಡ್ಕ ಕುಂಬ್ಡಾಜೆ ಗ್ರಾಮಸೇವಾ ಗ್ರಂಥಾಲಯದ ಆಶ್ರಯದಲ್ಲಿ ಡಾ ವೈ. ಕೆ ಕೇಶವ ಭಟ್ ಸಂಸ್ಮರಣಾ ಕಾರ್ಯಕ್ರಮವನ್ನು ಏತಡ್ಕ ಸಮಾಜಮಂದಿರದಲ್ಲಿ ಆಚರಿಸಲಾಯಿತು. ಗ್ರಂಥಾಲಯದ ಅಧ್ಯಕ್ಷ ವೈ.ವಿ. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಈಶ್ವರೀ ಬೇರ್ಕಡವು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಡಾ ವೈ.ಕೆ. ಕೇಶವ ಭÀಟ್ಟರು ಏತಡ್ಕದ ಸರ್ವತೋಮುಖ ಅಭಿವೃದ್ಧಿಯ ರೂವಾರಿಯಾಗಿದ್ದರಲ್ಲದೇ ತಮ್ಮ ವೈಯುಕ್ತಿಕ ಜೀವನದಲ್ಲೂ ಮಾರ್ಗದರ್ಶಕರಾಗಿದ್ದರೆಂದು ಅವರು ಹೇಳಿದರು.
ವೈ.ಕೆ. ಗೋವಿಂದ ಭಟ್, ಡಾ. ಮೋಹನ್ ಕುಮಾರ್, ಡಾ. ವೇಣುಗೋಪಾಲ ಕೆ ಅಭಿಪ್ರಾಯ ಹಂಚಿಕೊಂಡರು. ನರಸಿಂಹ ಭಟ್ ಕೆ ಸ್ವರಚಿತ ಕವನ ವಾಚಿಸಿದರು. ಡಾ. ವೇಣುಗೋಪಾಲ ಕೆ ಸ್ವಾಗತಿಸಿ, ವೈ.ಕೆ. ಗಣಪತಿ ಭಟ್ ವಂದಿಸಿದರು. ಕಾರ್ಯಕಾರೀ ಸಮಿತಿ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಡಾ.ವೈ.ಕೆ.ಕೇಶವ ಭಟ್ ಸಂಸ್ಮರಣಾ ಕಾರ್ಯಕ್ರಮ
0
ಡಿಸೆಂಬರ್ 04, 2022