ಅತ್ಯಧಿಕ ರಕ್ತದೊತ್ತಡ ಅಥವಾ ಬಿಪಿ ಜನ ಸಾಮಾನ್ಯರನ್ನು ಕಶಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ. ಕೆಲವರಿಗಂತೂ 35-40 ವರ್ಷದೊಳಗಡೆ ಈ ಸಮಸ್ಯೆ ಕಂಡು ಬರುತ್ತಿದೆ.
ಅತ್ಯಧಿಕ ಒತ್ತಡದ ಬದುಕು ಬಿಪಿ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಬಿಪಿ ಸಮಸ್ಯೆ ಇರುವವರು ಸೋಡಿಯಂ ಕಡಿಮೆ ಇರುವ ಈ ಆಹಾರಗಳನ್ನು ಸೇವಿಸಿದರೆ ಬಿಪಿ ನಿಯಂತ್ರಣಕ್ಕೆ ತರಬಹುದು:
1.ನುಗ್ಗೆಕಾಯಿ ಸೊಪ್ಪು
ನುಗ್ಗೆಕಾಯಿ ಸೊಪ್ಪು ಕೂಡ ಬಿಪಿ ಕಡಿಮೆ ಮಾಡುವಲ್ಲಿ ಪರಿಣಾಮಕಾರಿ. ಇದರ ಪಲ್ಯ ಅಥವಾ ಸಾರು ಮಾಡಿ ತಿನ್ನಬಹುದು.
2. ಬಾಳೆಹಣ್ಣು
ಬಿಪಿ ಸಮಸ್ಯೆ ಇರುವವರು ಬಾಳೆಹಣ್ಣು ಸೇವಿಸುವುದು ತುಂಬಾನೇ ಒಳ್ಳೆಯದು.ಬಾಳೆದಿಂಡು, ಬಾಳೆಹೂ ಇವುಗಳನ್ನು ಕೂಡ ಸೇವಿಸಬಹುದು.
3. ಬೀಟ್‌ರೂಟ್
ಬಿಪಿ ಸಮಸ್ಯೆ ಇರುವವರು ಬೀಟ್‌ರೂಟ್ ಸೇವನೆ ಮಾಡುವುದು ಕೂಡ ತುಂಬಾ ಒಳ್ಳೆಯದು. ಇದರ ಜ್ಯೂಸ್ ಮಾಡಿ ಕುಡಿಯಿರಿ.
4. ಓಟ್‌ಮೀಲ್
ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಓಟ್‌ಮೀಲ್ ಸೇವನೆ ಒಳ್ಳೆಯದು. ಇದರಿಂದ ನೀವು ದೋಸೆ, ಇಡ್ಲಿ ಮಾಡಿ ಕೂಡ ಸವಿಯಬಹುದು, ಆದರೆ ಉಪ್ಪಿನಂಶ ಕಡಿಮೆ ಬಳಸಿ.
5. ಸೆಲರಿ
ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸೆಲರಿ ಸೇವನೆ ಕೂಡ ಪರಿಣಾಮಕಾರಿ. ಸೆಲರಿ ರಕ್ತದೊತ್ತಡ ಕಡಿಮೆ ಮಾಡುತ್ತದೆ ಹಾಗೂ ರಕ್ತ ಸಂಚಾರ ಸರಾಗವಾಗಿ ನಡೆಯಲು ಸಹಕಾರಿ.
6. ಪಾಲಾಕ್
ಪಾಲಾಕ್‌ನಲ್ಲಿ ಫೋಲೆಟ್, ಕಬ್ಬಿಣದಂಶ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂಅಧಿಕವಿದ್ದು ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
ಯಾವ ಬಗೆಯ ಆಹಾರ ಸೇವಿಸಬಾರದು?
* ಡಬ್ಬದಲ್ಲಿ ಸಂಗ್ರಹಿಸಿಟ್ಟ ಆಹಾರಸೇವಿಸಬೇಡಿ, ಇದರಲ್ಲಿ ಉಪ್ಪಿನಂಶ ಅಧಿಕವಿರುತ್ತದೆ.
* ಸೋಯಾ ಸಾಸ್ ಬಳಸಬಾರದು'
* ಉಪ್ಪಿನಕಾಯಿ ಸೇವಿಸಬಾರದು
* ಸಂಗ್ರಹಿಸಿಟ್ಟ ಆಹಾರ ಸೇವಿಸಬೇಡಿ
* ಕಾಟೇಜ್ ಚೀಸ್
*ಪಿಜ್ಜಾ
* ಬರ್ಗರ್