ಕಾಸರಗೋಡು: ಜಿಲ್ಲಾ ಮಾಹಿತಿ ಕಛೇರಿ ವತಿಯಿಂದ ಪರಿಶಿಷ್ಟ ಪಂಗಡದ ಸಂಗಮ ಕಾರ್ಯಕ್ರಮ ಪರಪ್ಪ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಇಂದಿನ ಸಮಾಜ ಮತ್ತು ಮುಂದಿನ ಪೀಳಿಗೆಗೆ ತಿಳಿಯಬೇಕಾದ ಜೀವನ ಪಾಠಗಳನ್ನು ಗುರುತಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ ಹಾಗೂ ಮಂಗಳಂಕಳಿ ಕಲಾವಿದೆ ಹಾಗೂ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತೆ ಉಂಬಿಚ್ಚಿಯಮ್ಮ ಕಾರ್ಯಕ್ರಮ ಜಂಟಿಯಾಘಿ ಉದ್ಘಾಟಿಸಿದರು.
ಮಹಿಳಾ ಸುರಕ್ಷತೆ ಹಿನ್ನೆಲೆಯಾಗಿಸಿರುವ ಕಾನೂನುಗಳು, ಆತ್ಮರಕ್ಷಣೆಗಾಗಿ ಪ್ರಾಯೋಗಿಕ ಪಾಠಗಳು ಮತ್ತು ಭವಿಷ್ಯ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಅವಕಾಶಗಳು, ಉದ್ಯೋಗಾವಕಾಶಗಳು ಹಾಗೂ ಮಾದಕ ವ್ಯಸನ ವಿರೋಧಿ ಸಂದೇಶ ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ. ಭೂಪೇಶ್ ಅಧ್ಯಕ್ಷತೆ ವಹಿಸಿದ್ದರು. ಪರಪ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಹೆರಾಲ್ಡ್ ಜಾನ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಸಿ. ಕೆ.ಶೀಬಾ ಮುಮ್ತಾಜ್ ಮಹಿಳಾ ಸುರಕ್ಷತಾ ವಿಚಾರ ಸಂಕಿರಣ ನಡೆಸಿಕೊಟ್ಟರು. ಮಹಿಳೆಯರ ಸುರಕ್ಷತೆಗಾಗಿ ಕಾನೂನುಗಳು ಮತ್ತು ಅವುಗಳನ್ನು ಸಾಧಿಸುವ ಮಾರ್ಗಗಳನ್ನು ಹಂಚಿಕೊಳ್ಳಲಾಯಿತು. ವೆಳ್ಳರಿಕುಂಡ್ ಪೆÇಲೀಸ್ ಠಾಣೆಯ ಹಿರಿಯ ಸಿಪಿಒ ಟಿ.ವಿ. ಸಜಿತಾ, ನೀಲೇಶ್ವರಂಪೆÇಲೀಸ್ ಠಾಣೆಯ ಸಿಪಿಒ ಸೈದಾ ಅವರು ರಕ್ಷಣಾ ಪಾಠವನ್ನು ಪ್ರಸ್ತುತಪಡಿಸಿದರು.
ಹೈಯರ್ ಸೆಕೆಂಡರಿ ಶಿಕ್ಷಕ ಮತ್ತು ವೃತ್ತಿ ಮಾರ್ಗದರ್ಶನ ತರಬೇತುದಾರ ಡಾ.ಜಿ. ಕೆ.ಗೋಪೇಶ್ ವೃತ್ತಿ ಮಾರ್ಗದರ್ಶನ, ಅಬಕಾರಿ ತಡೆ ಅಧಿಕಾರಿ ಎನ್.ಜಿ. ರಘುನಾಥನ್ ಮಾದಕ ವಸ್ತು ವಿರೋಧಿ ವಿಚಾರ ಸಂಕಿರಣ ನಡೆಸಿಕೊಟ್ಟರು. ಹಿರಿಯರಾದ ರಾಘವನ್, ಭಾಸ್ಕರನ್, ಸುರೇಶ್ ಕುಮಾರ್, ಪ್ರತಿನಿಧಿಗಳಾದ ಸನೋಜ್, ಸಜಿತಾ ಉಪಸ್ಥಿತರಿದ್ದರು. ಮಂಗಳಂಕಳಿ ಕಲಾವಿದೆ ಹಾಗೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕøತೆ ಉಂಬಿಚ್ಚಿಯಮ್ಮ ಅವರು ಪ್ರಸ್ತುತಪಡಿಸಿದ ಮಂಗಳಂಕಳಿ ಹಾಡು ಮನ್ನಣೆ ಗಳಿಸಿತು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಸ್ವಾಗತಿಸಿದರು. ಮಾಹಿತಿ ಸಹಾಯಕ ಅರುಣ್ ಸೆಬಾಸ್ಟಿಯನ್ ವಂದಿಸಿದರು.
ಪರಪ್ಪ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಪರಿಶಿಷ್ಟ ಪಂಗಡದ ಸಂಗಮ
0
ಡಿಸೆಂಬರ್ 13, 2022
Tags