ಕಾಸರಗೋಡು: ಸಾರ್ವಜನಿಕ ಶಿಕ್ಷಣ ಇಲಾಖೆಯ ಹೈಯರ್ ಸೆಕೆಂಡರಿ ವಿಭಾಗ ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹೈಯರ್ ಸೆಕೆಂಡರಿ ಅರ್ಥಶಾಸ್ತ್ರ ಶಿಕ್ಷಕರಿಗಾಗಿ 10 ದಿವಸಗಳ ಪರಿವರ್ತನಾ ಕಾರ್ಯಕ್ರಮಕ್ಕೆ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
ಕಣ್ಣೂರು ವಿವಿ ಸಿಂಡಿಕೇಟ್ ಸದಸ್ಯ ಹಾಗೂ ಮಾಜಿ ರಿಜಿಸ್ಟ್ರಾರ್ ಡಾ.ಎ. ಅಶೋಕನ್ ಉದ್ಘಾಟಿಸಿದರು. ಕಾಲೇಜಿನ ಉಪ ಪ್ರಾಂಶುಪಾಲ ಡಾ. ಲಿಯಾಖತ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಡಾ. ಜಿಜೋ ಪಿ.ಯೂ, ಮಹಮ್ಮದ್ ಕುಞÂ ಉಪಸ್ಥಿತರಿದ್ದರು. ಅರ್ಥಶಾಸ್ತ್ರ.ವಿಭಾಗದ ಮುಖ್ಯಸ್ಥ ಡಾ. ರೆಜುನಾ ಸಿ.ಎ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ರಾಬಿನ್ಸ್ ವಂದಿಸಿದರು. ವಿವಿಧ ದಿವಸಗಳಲ್ಲಿ ಭಾರತೀಯ ವಿಶ್ವವಿದ್ಯಾನಿಲಯಗಳ ಅರ್ಥಶಾಸ್ತ್ರ ತಜ್ಞರು ಕೋರ್ಸ್‍ಗಳನ್ನು ನಡೆಸಲಿದ್ದಾರೆ.
ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪರಿವರ್ತನಾ ಕಾರ್ಯಕ್ರಮಕ್ಕೆ ಚಾಲನೆ
0
ಡಿಸೆಂಬರ್ 11, 2022
Tags