HEALTH TIPS

ಕಯ್ಯೂರು ಫೆಸ್ಟ್ ಜನರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಬಲ್ಲದು: ಸಚಿವೆ ಡಾ.ಆರ್.ಬಿಂದು


         ಕಾಸರಗೋಡು:  ಕಯ್ಯೂರು ಉತ್ಸವದಂತಹ ಕಾರ್ಯಕ್ರಮಗಳು ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ ಎಂದು ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಸಚಿವೆÀ ಡಾ.ಆರ್.ಬಿಂದು ತಿಳಿಸಿದರು.
        ಕಯ್ಯೂರು ಸರಕಾರಿ ಎಲ್‍ಪಿ ಶಾಲೆಯ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾದ ಕಯ್ಯೂರು ಫೆಸ್ಟ್ ಅಖಿಲ ಭಾರತ ವಸ್ತುಪ್ರದರ್ಶನದಲ್ಲಿ ಸಚಿವರು ಸಾಂಸ್ಕøತಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
        ನಾವು ದ್ವೇಷದ ಕಾಲವನ್ನು ಎದುರಿಸುತ್ತಿದ್ದೇವೆ. ಸ್ತ್ರೀದ್ವೇಷದ ಕಾಲದಲ್ಲಿ ಸೃಜನಶೀಲತೆಯ ಕವಚವನ್ನು ಹಿಡಿದುಕೊಂಡು ನಾವು ಮುಂದೆ ಸಾಗುತ್ತಿದ್ದೇವೆ. ಕಯ್ಯೂರ್ ಫೆಸ್ಟ್‍ನಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಈ ಪ್ರತಿರೋಧಕ್ಕೆ ಉದಾಹರಣೆಯಾಗಿದೆ. ಜಾತಿ, ಧರ್ಮದ ಬೇಧವಿಲ್ಲದೆ ಇಂತಹ ಸಭೆ ಸಮಾರಂಭಗಳಲ್ಲಿ ಒಂದೆಡೆ ಸೇರಿದಾಗ ಒಗ್ಗಟ್ಟಿನ ಸಂದೇಶ ಸಾರಿದಂತಾಗುತ್ತದೆ. ಜನರು ತಮ್ಮ ಮನೆಯ ಗೋಡೆಯೊಳಗೆ ಬಂಧಿಯಾಗಿರುವ ಸಮಯದಲ್ಲಿ ಇಂತಹ ವೇದಿಕೆಗಳಿಗೆ ಜನರನ್ನು ಕರೆತರುವುದು ದೊಡ್ಡ ವಿಷಯ. ಸಂಗೀತವನ್ನು ಆಸ್ವಾದಿಸಿದಾಗ ಜನರು ಒಂದಾಗುತ್ತಾರೆ. ಇದು ಕಲೆಯ ಶಕ್ತಿ. ಜನರು ದ್ವೇಷದ ಗೋಡೆಯನ್ನು ಕಟ್ಟಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಇಂತಹ ಉತ್ಸವಗಳು ಪ್ರೀತಿಯ ಸೇತುವೆಯನ್ನು ನಿರ್ಮಿಸುತ್ತವೆ. ಇಂದು ನಾವು ಎದುರಿಸುತ್ತಿರುವ ದ್ವೇಷ ಮತ್ತು ವ್ಯಸನದ ಬೆದರಿಕೆಯನ್ನು ಸೃಜನಶೀಲತೆ ಮತ್ತು ಪ್ರೀತಿಯ ಗುರಾಣಿಯಿಂದ ಎದುರಿಸಬೇಕು ಎಂದು ಸಚಿವರು ಹೇಳಿದರು.
           ಶಾಸಕ ಎಂ.ರಾಜಗೋಪಾಲನ್  ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯಿತಿ ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಶಕುಂತಳಾ, ಕಾಞಂಗಾಡು ನಗರಸಭಾ ಸದಸ್ಯ ವಿ.ವಿ. ರಮೇಶ, ಸಂಘಟನಾ ಸಮಿತಿಯ ಸಂಚಾಲಕ ಎಂ. ರಾಜೀವನ್, ಕೈಯೂರು ಚಿಮೇನಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ. ಶಾಂತಾ, ಸಂಘಟನಾ ಸಮಿತಿ ಕಾರ್ಯಾಧ್ಯಕ್ಷ ಟಿ. ದಾಮೋದರನ್, ಕಯಾನಿ ಕುಂಞÂ ಕಣ್ಣನ್, ಜನಪ್ರತಿನಿಧಿಗಳು ಮತ್ತಿತರರು ಭಾಗವಹಿಸಿದ್ದರು. ಕಯ್ಯೂರು ಜಿ.ಎಲ್.ಪಿ.ಶಾಲೆ ಮುಖ್ಯೋಪಾಧ್ಯಾಯ ಮಧುಸೂದನನ್ ಸ್ವಾಗತಿಸಿ, ಪ್ರಚಾರ ಸಮಿತಿ ಸಂಚಾಲಕ ಕೆ.ಪಿ.ವಿಜಯಕುಮಾರ್ ವಂದಿಸಿದರು.
         ಕೋಝಿಕ್ಕೋಡ್ ಸೂಪರ್ ಟ್ರೂಪ್ ನ ಪ್ರದರ್ಶನ ನಡೆಯಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries