ಕಾಸರಗೋಡು: ಮುಳಿಯಾರಿನಲ್ಲಿ ಆರಂಭಗೊಂಡಿರುವ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮದ ಮೊದಲ ಹಂತದ ಕಾಮಗಾರಿ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಆರ್. ಬಿಂದು ತಿಳಖಿಸಿದ್ದಾರೆ.
ಅವರು ಯೋಜನಾ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಕಾಂಗಾರಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಎಲ್ಲಾ ವಿಧ ಥೆರಪ್ಪಿ ಚಿಕಿತ್ಸಾ ಸೌಲಭ್ಯ ಒಳಗೊಂಡಂತೆ ಎಂಡೋಸಲ್ಫಾನ್ ಸಂತ್ರಸ್ತರಿಗೆ ಆರೋಗ್ಯ ಹಾಗೂ ಇತರ ಸೌಲಬ್ಯ ಒದಗಿಸುವ ಪುನರ್ವಸತಿ ಗ್ರಾಮ ಇಲ್ಲಿ ತಲೆಯೆತ್ತಲಿದೆ. ಇದಕ್ಕೆ ಅಗತ್ಯವಿರುವ ಮಾಸ್ಟರ್ ಪ್ಲಾನ್ ತಯಾರಿಸಲು ಅಲಹೆ ನೀಡಲಾಗಿದೆ. ವಿವರವಾದ ಯೋಜನಾ ದಾಖಲೆ ಸಿದ್ಧಪಡಿಸಿ ಅಗತ್ಯ ಹಣ ಸಂಗ್ರಹಿಸಿ ಯೋಜನೆ ಮುಂದುವರಿಸಲಾಗುವುದು ಎಂದು ಸಚಿವೆ ಆರ್. ಬಿಂದು ತಿಳಿಸಿದರು. ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಶಾಸಕ ಸಿ.ಎಚ್ ಕುಞಂಬು, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಶೀಬಾ ಮುಮ್ತಾಜ್, ಕೆ.ಪಿ.ಬೀನಾ, ಎಂ.ಅಬ್ದುಲ್ಲಾ, ಎ.ಮುಹಮ್ಮದ್ ನೌಫಲ್, ಕಂದಾಯ ಅಧಿಕಾರಿಗಳು, ಗುತ್ತಿಗೆದಾರರ ಪ್ರತಿನಿಧಿಗಳು ಉಪಸ್ಥಿತರಿದ್ದರು. ಪುನರ್ವಸತಿ ಗ್ರಾಮದ ಮೊದಲ ಹಂತವು ಕ್ಲಿನಿಕಲ್ ಸೈಕಾಲಜಿ ಬ್ಲಾಕ್, ಕೌನ್ಸೆಲಿಂಗ್ ಮತ್ತು ಹೈಡ್ರೋಥೆರಪಿ ಬ್ಲಾಕ್‍ನೊಂದಿಗೆ ಪೂರ್ಣಗೊಳ್ಳಲಿದೆ. ಉರಾಳುಂಗಲ್ ಗುತ್ತಿಗೆ ಕಾರ್ಮಿಕ ಸಹಕಾರ ಸಂಘದಿಂದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರಸ್ತುತ ಪ್ರದೇಶದ ಸಮತಟ್ಟು ಕಾರ್ಯ ಪೂರ್ಣಗೊಂಡಿದ್ದು, ಎರಡೂ ಕಟ್ಟಡಗಳ ಅಡಿಪಾಯ ಕಾಮಗಾರಿ ಪ್ರಗತಿಯಲ್ಲಿದೆ.
ಮುಳಿಯಾರಿನ ಎಂಡೋಸಲ್ಫಾನ್ ಪುನರ್ವಸತಿ ಕೇಂದ್ರಕ್ಕೆ ಸಚಿವೆ ಆರ್.ಬಿಂದು ಭೇಟಿ-ಕಾಮಗಾರಿ ಅವಲೋಕನ
0
ಡಿಸೆಂಬರ್ 31, 2022
Tags