ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮುಳ್ಳೇರಿಯ ಹವ್ಯಕಮಂಡಲದ ನೀರ್ಚಾಲು ವಲಯದ ನೇತೃತ್ವದಲ್ಲಿ ವಲಯೋತ್ಸವ ಕಾರ್ಯಕ್ರಮ ನಿಡುಗಳ ಅಗ್ರಸಾಲೆ ಶ್ರೀ ಶಾಸ್ತಾರ ಸಭಾ ಭವನದಲ್ಲಿ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಬೆಳಗ್ಗೆ ಧ್ವಜಾರೋಹಣ, ಗುರುವಂದನೆ, ಶಂಖನಾದ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಾತೃವಿಭಾಗದ ನೇತೃತ್ವದಲ್ಲಿ ಭಜನೆ, ಶ್ರೀರಾಮಭುಜಂಗ ಪ್ರಯಾತ ಸ್ತೋತ್ರ ಪಾರಾಯಣ, ಕುಂಕುಮಾರ್ಚನೆ ಜರಗಿತು. ಸಭಾಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಳ್ಳೇರಿಯ ಮಂಡಲದ ಶಿಷ್ಯಮಾಧ್ಯಮ ವಿಭಾಗದ ಗೋವಿಂದ ಭಟ್ ಬಳ್ಳಮೂಲೆ, ಕೋಶಾಧಿಕಾರಿ ಶ್ರೀಹರಿಪ್ರಸಾದ ಪೆರ್ಮುಖ, ಪಳ್ಳತ್ತಡ್ಕ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ಸಂಘಟನಾತ್ಮಕ ವಿಚಾರಗಳನ್ನು ಹಂಚಿಕೊಂಡರು. ನೀರ್ಚಾಲು ವಲಯ ಕಾರ್ಯದರ್ಶಿ ಮಹೇಶ ಸರಳಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಕಕ್ಕಳ ವಂದಿಸಿರು. ಮಧ್ಯಾಹ್ನ ಮಹಾಪೂಜೆ ನಡೆಯಿತು. ವೇದಮೂರ್ತಿ ಶಂಕರನಾರಾಯಣ ಶರ್ಮ ನಿಡುಗಳ ಪ್ರಾರ್ಥನೆ ನಿರ್ವಹಿಸಿದರು.
ನೀರ್ಚಾಲು ವಲಯೋತ್ಸವ, ಶ್ರೀ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮ ಸಂಪನ್ನ
0
ಡಿಸೆಂಬರ್ 06, 2022
Tags