ಕಾಸರಗೋಡು: ಕೂಡ್ಲು ಚೈತನ್ಯ ವಿದ್ಯಾಲಯ, ಋಷಿಕ್ಷೇತ್ರದ ವಾರ್ಷಿಕೋತ್ಸವು ಇತ್ತೀಚೆಗೆ ವಿದ್ಯಾಲಯ ಸಭಾಂಗಣದಲ್ಲಿಜರಗಿತು. ಎಡನೀರು ಮಠಾಧೀಶ ಶ್ರೀ ಶ್ರೀಸಚ್ಚಿದಾನಂದ ಭಾರತಿಶ್ರೀ ಪಾದಂಗಳವರು ದೀಪಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಶುಭಾಶಂಸನೆಗೈದರು. ಸಮಾರಂಭದಲ್ಲಿಕಾಸರಗೋಡಿನ ಜನಪ್ರಿಯ ವೈದ್ಯರಾದ ಡಾ. ಜಯದೇವ ಕಂಗಿಲ ಹಾgಗೂ ಡಾ. ಉಮಾಮಹೇಶ್ವರಿ ಎ. ಎಸ್ ಅವರನ್ನು ಸನ್ಮಾನಿಸಲಾಯಿತು. ಚೈತನ್ಯ ಟ್ರಸ್‍ನ ಅಧ್ಯಕ್ಷ ಇ.ಎಸ್ ಮಹಾಬಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಕ್ಕಳಿಂದ ವರ್ಣರಂಜಿತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿತು.
ಚೈತನ್ಯ ವಿದ್ಯಾಲಯ ವಾರ್ಷಿಕೋತ್ಸವ, ಎಡನೀರುಶ್ರೀ ಆಶೀರ್ವಚನ
0
ಡಿಸೆಂಬರ್ 30, 2022
Tags