ಉಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ ಯೋ ಪೈವಳಿಕೆ ವಲಯ ಇದರ ಸಹಕಾರದೊಂದಿಗೆ ಜ್ಞಾನಜೋತಿ ನವಜೀವನ ಸಮಿತಿ ವತಿಯಿಂದ ಡಿ. 31ರಂದು ಪೈವಳಿಕೆ ಲಾಲ್ ಬಾಗ್ ನಲ್ಲಿ ನಡೆಯಲಿರುವ 5 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಗೆಜ್ಜಗಿರಿ ಮೇಳದ ಶ್ರೀ ಕ್ಷೇತ್ರಮಹಾತ್ಮೆ ಯಕ್ಷಗಾನ ಸೇವಾ ಬಯಲಾಟದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಈ ಸಂದರ್ಭ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಬಾಗ್, ಗೆಜ್ಜೆಗಿರಿ ಯಕ್ಷಗಾನ ಬಯಲಾಟ ಪೈವಳಿಕೆ ಇದರ ಕೋಶಾಧಿಕಾರಿ ಮಹಾಬಲ ಪೂಜಾರಿ ಸುದೆಂಬಳ, ಸೇವಾಪ್ರತಿನಿಧಿ ಲೀಲಾವತಿ ಪಾಡಿ, ಸುರೇಶ್ ಅಮ್ಮೇರಿ, ಜ್ಞಾನಜ್ಯೋತಿ ನವಜೀವನ ಸಮಿತಿ ಅಧ್ಯಕ್ಷ ರಾಜೇಶ್, ಸದಸ್ಯರಾದ ಆನಂದ ಪಿ ಬಾಳೆಹಿತ್ತಿಲು, ಪ್ರಸಾದ್ ಜೋಡುಕಲ್ಲು, ಸುಂದರ, ಶಶಿಧರ ಬಾಯಿಕಟ್ಟೆ, ಯಶೋದರ, ಕೃಷ್ಣ ಕನ್ಯಾನ, ಲಕ್ಷ್ಮಣ ಕನ್ಯಾನ, ರಘು ಪೆರ್ಮುದೆ, ಚಂದ್ರ ಪೆರ್ಮುದೆ, ರಾಮಚಂದ್ರ ಬಾಯಿಕಟ್ಟೆ, ಪ್ರಶಾಂತ್ ಪೈವಳಿಕೆ, ವಿನೋದ್, ಜಗನ್ನಾಥ ಮತ್ತು ಪ್ರಭಾಕರ ಉಪಸ್ಥಿತರಿದ್ದರು.
ಯಕ್ಷಗಾನ ಬಯಲಾಟ: ಆಮಂತ್ರಣ ಪತ್ರಿಕೆ ಬಿಡುಗಡೆ
0
ಡಿಸೆಂಬರ್ 06, 2022