ತಿರುವನಂತಪುರಂ; ಶಾಲಾ ಅವಧಿಯನ್ನು ಬದಲಾಯಿಸುವ ಬಗ್ಗೆ ಯೋಚಿಸಿಲ್ಲ ಎಂದು ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಹೇಳಿದ್ದಾರೆ. ಬೆಳಗ್ಗೆ 7 ಗಂಟೆಗೆ ತರಗತಿ ಆರಂಭಿಸಲು ಸರಕಾರ ನಿರ್ಧರಿಸಿಲ್ಲ. ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆ 7 ಗಂಟೆಗೆ ತರಗತಿ ಆರಂಭಿಸುವ ಶಾಲೆಗಳಿವೆ ಎಂದಿರುವರು.
ಶಾಸಕ ಎನ್.ಶಂಶುದ್ದೀನ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬೆಳಗ್ಗೆ 7 ಗಂಟೆಗೆ ತರಗತಿ ಆರಂಭಿಸಲು ಸರಕಾರ ನಿರ್ಧರಿಸಿಲ್ಲ ಎಂದರು.
ಬಹುತ್ವ ಮತ್ತು ವೈವಿಧ್ಯತೆಯನ್ನು ಒಪ್ಪಿಕೊಳ್ಳುವುದು ಮತ್ತು ಉತ್ತೇಜಿಸುವುದು ಸರ್ಕಾರದ ನೀತಿಯಾಗಿದೆ. ಧಾರ್ಮಿಕ ಶಿಕ್ಷಣವನ್ನು ರದ್ದುಪಡಿಸುವ ಉದ್ದೇಶ ಸರಕಾರಕ್ಕಿಲ್ಲ. ಕೇರಳದ ಹೊರಗಿನ ಶಿಕ್ಷಣ ತಜ್ಞರು, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಕಾಲೇಜು ಶಿಕ್ಷಕರು ಮತ್ತು ಶಾಲಾ ಶಿಕ್ಷಕರೊಂದಿಗೆ 26 ಪೋಕಸ್ ಗುಂಪುಗಳನ್ನು ರಚಿಸಲಾಗಿದೆ. ಈ ಫೆÇೀಕಸ್ ಏರಿಯಾಗಳಿಗೆ ಸಂಬಂಧಿಸಿದಂತೆ ಪೊಸಿಷನ್ ಪೇಪರ್ ಸಿದ್ಧಪಡಿಸುವ ಕೆಲಸ ಅಂತಿಮ ಹಂತದಲ್ಲಿದೆ ಎಂದು ಶಿವನ್ ಕುಟ್ಟಿ ಹೇಳಿದರು.
ಶಾಲಾ ಸಮಯ ಬದಲಿಸುವ ಮತ್ತು ಧಾರ್ಮಿಕ ಶಿಕ್ಷಣವನ್ನು ರದ್ದುಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ; ಸಚಿವ ವಿ.ಶಿವಂಕುಟ್ಟಿ
0
ಡಿಸೆಂಬರ್ 12, 2022