ಬದಿಯಡ್ಕ: ಊರಿನ ದೇವಸ್ಥಾನಗಳು, ಮಠ ಮಂದಿರಗಳು ಜೀರ್ಣೋದ್ಧಾರಗೊಂಡು ಬೆಳಗಿದರೆ ಆ ಊರಿನ ಮನೆ-ಮನಗಳು ಬೆಳಗಿದಂತೆ ಎಂದು ಮಂಗಳೂರಿನ ಖ್ಯಾತ ವೈದ್ಯ ಡಾ. ನರೇಶ್ ರೈ ಅವರು ನುಡಿದರು.
ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಭಾನುವಾರ ಜೀರ್ಣೋದ್ಧಾರ ನಿಧಿ ಕೂಪನ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಗ್ರಾಮದ ಭಕ್ತ ಜನರೆಲ್ಲಾ ಒಂದುಗೂಡಿ ದೇವಸ್ಥಾನದ ಜೀರ್ಣೋದ್ಧಾರ ಕ್ರಿಯೆ ಶೀಘ್ರ ಪೂರ್ಣಗೊಳ್ಳಲಿ ಎಂದರು.
ಧಾರ್ಮಿಕ ಮುಂದಾಳು, ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡಿನ ಖ್ಯಾತ ವೈದ್ಯ ಡಾ. ಜನಾರ್ದನ ನಾಯಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬದಿಯಡ್ಕ ಗ್ರಾಮ ಪಂಚಾಯತಿ ಜನಪ್ರತಿನಿಧಿ ಶ್ಯಾಮ್ ಪ್ರಸಾದ್ ಮಾನ್ಯ, ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಸೇವಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಮಾನ ಮಾಸ್ತರ್ ಕಾರ್ಮರು, ಶ್ಯಾಮ ಭಟ್ ಏವುಂಜೆ, ರಾಮ ಕಾರ್ಮಾರು ಮೊದಲಾದವರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ ಸ್ವಾಗತಿಸಿ, ವಿಜಯ್ ಕುಮಾರ್ ಮಾನ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕ ಕ್ಷೇತ್ರವು ಬೆಳಗಿದರೆ ಊರಿಗೇ ಬೆಳಕು: ಡಾ. ನರೇಶ್ ರೈ: ಕಾರ್ಮಾರು ಕ್ಷೇತ್ರ ಜೀರ್ಣೋದ್ಧಾರ ನಿಧಿ ಕೂಪನ್ ಬಿಡುಗಡೆ
0
ಡಿಸೆಂಬರ್ 06, 2022