ಕುಂಬಳೆ: ಭಾರತೀಯ ಜನತಾ ಪಕ್ಷ ಪುತ್ತಿಗೆ ಪಂಚಾಯತಿ ಕಣ್ಣೂರು ವಾರ್ಡ್ ಗೆ ಒಳಪಟ್ಟ 181,182 ಬೂತ್ ಗಳ ಮಾಸಿಕ ಸಭೆ ಬೂತ್ ಅಧ್ಯಕ್ಷ ಮನೋಹರ ಬಳಕ್ಕಿಲ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಕೆ.ಟಿ ಜಯಕೃಷ್ಣನ್ ಮಾಸ್ತರ್ ಅವರಿಗೆ ಪುಷ್ಪಾರ್ಚನೆ ಮಾಡಲಾಯಿತು. ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ವಾರ್ಡ್ ಸದಸ್ಯ ಜನಾರ್ದನ ಕಣ್ಣೂರು, ಎಸ್ ಸಿ ಮೋರ್ಚಾ ನೇತಾರ ಬಿಜು ಬೆಣ್ಣೆಮೂಲೆ ಮತ್ತು ಕಾರ್ಯಕರ್ತರು ಭಾಗವಹಿಸಿದರು.
ಬಿಜೆಪಿ ಬೂತ್ ಸಮಿತಿ ಸಭೆ
0
ಡಿಸೆಂಬರ್ 27, 2022