ಕಾಸರಗೋಡು: ಜಿಲ್ಲಾ ಪಂಚಾಯಿತಿ ವತಿಯಿಂದ ಚಟ್ಟಂಚಾಲ್ ಕೈಗಾರಿಕಾ ಪ್ರಾಂಗಣದಲ್ಲಿ ಸ್ಥಾಪಿಸಲಾಗಿರುವ ಆಕ್ಸಿಜನ್ ಘಟಕದಲ್ಲಿ ಕೊನೆಗೂ ಆಮ್ಲಜನಕ ಪೂರೈಕೆ ಆರಂಭಗೊಂಡಿದೆ. ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಚಟ್ಟಂಚಾಲ್ ಕೈಗಾರಿಕಾ ಪಾರ್ಕ್‍ನಲ್ಲಿ ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ. ಕೋವಿಡ್ ಬಿಕ್ಕಟ್ಟಿನ ನಂತರ ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಮ್ಲಜನಕ ಘಟಕ ಆರಂಭಿಸಲು ತೀರ್ಮಾನಿಸಲಾಗಿತ್ತು. ಕೋವಿಡ್ ಬಿಕ್ಕಟ್ಟಿನ ನಂತರ ಆಸ್ಪತ್ರೆಗಳಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚಾಗಿ, ಪೂರೈಕೆ ಗಣನೀಯವಾಗಿ ಕುಸಿದಿರುವುದನ್ನು ಮನಗಂಡ ಹೊಸ ಪ್ಲಾಂಟ್ ಸಥಾಪನೆಗೆ ಯೋಜನೆಹಾಕಿಕೊಳ್ಳಲಾಗಿತ್ತು.
ಚಟ್ಟಂಚಲ್ ಇಂಡಸ್ಟ್ರಿಯಲ್ ಪಾರ್ಕ್‍ನಲ್ಲಿ ಜಿಲ್ಲಾ ಪಂಚಾಯಿತಿಯ 50 ಸೆಂಟ್ಸ್ ಜಾಗವನ್ನು ಇದಕ್ಕಾಗಿ ಮೀಸಲಿಟ್ಟಿದೆ. ಯೋಜನೆಗೆ ಜಿಲ್ಲಾ ಪಂಚಾಯಿತಿ 1.27 ಕೋಟಿ ರೂ. ಗ್ರಾಮ ಮತ್ತು ಬ್ಲಾಕ್ ಪಂಚಾಯಿತಿಗಳು ಮತ್ತು ನಗರಸಭೆಗಳಿಂದ ಪಡೆದ ಮೊತ್ತದೊಂದಿಗೆ 2.97 ಕೋಟಿ ರೂಪಾಯಿಗಳನ್ನು ಸ್ಥಾವರಕ್ಕೆ ಖರ್ಚು ಮಾಡಲಾಗಿದೆ. ದಿನಕ್ಕೆ 200 ಸಿಲಿಂಡರ್ ಆಮ್ಲಜನಕವನ್ನು ಉತ್ಪಾದಿಸುವ ಪ್ಲಾಂಟ್‍ನಿಂದ ವೈದ್ಯಕೀಯ ಹಾಗೂ ಉದ್ದಿಮೆಗಳಿಗೆ ಕಡಿಮೆ ಮೊತ್ತದಲ್ಲಿ ಆಕ್ಸಿಜನ್ ಪೂರೈಸುವ ಗುರಿಯಿರಿಸಲಾಗಿದೆ.
ಚಟ್ಟಂಚಾಲ್ ಆಕ್ಸಿಜನ್ ಪ್ಲಾಂಟ್‍ನಿಂದ ಮೊದಲ ಆಮ್ಲಜನಕ ವಿತರಣೆಯನ್ನು ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರು ಉದ್ಘಾಟಿಸಿದರು. ಕೈಗಾರಿಕಾ ವಲಯಕ್ಕೆ ಆಮ್ಲಜನಕ ಪೂರೈಕೆಗೆ ಸಂಸ್ಥೆ ಈಗಾಗಲೇ ಮಾಡಿಕೊಂಡ ಒಪ್ಪಂದದ ಹಿನ್ನೆಲೆಯಲ್ಲಿ ಆಮ್ಲಜನಕ ಸಿಲಿಂಡರ್ ವಿತರಿಸಲಾಯಿತು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಪಿ.ಸಜೀರ್ ಮತ್ತಿತರರು ಭಾಗವಹಿಸಿದ್ದರು.
ಚಟ್ಟಂಚಲ್ ಆಕ್ಸಿಜನ್ ಪ್ಲಾಂಟ್‍ನಿಂದ ಆಮ್ಲಜನಕ ಪೂರೈಕೆಗೆ ಚಾಲನೆ
0
ಡಿಸೆಂಬರ್ 20, 2022
Tags