ನವದೆಹಲಿ: ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐಗೆ ಬೇಹುಗಾರಿಕೆ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಸೂರತ್‌ನ ದೀಪಕ್ ಕಿಶೋರ್ ಭಾಯ್ ಸಲುಂಖೆ (33) ಎಂಬಾತನನ್ನು ಗುಜರಾತ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪುಣೆ ಮೂಲದ ದಕ್ಷಿಣ ಸೇನಾ ಕಮಾಂಡ್‌ನ ಮಿಲಿಟರಿ ಇಂಟೆಲಿಜೆನ್ಸ್ ನೀಡಿದ ಮಾಹಿತಿ ಆಧರಿಸಿ ವಜ್ರನಗರ ಅಪರಾಧ ದಳದ ಅಧಿಕಾರಿಗಳು ಸೂರತ್‌ನ ಭುವನೇಶ್ವರಿ ನಗರ ವಾಸಿ ದೀಪಕ್‌ನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.