ಕಣ್ಣೂರು: ವಿಶ್ವಕಪ್ ಫೈನಲ್‍ನಲ್ಲಿ ಅರ್ಜೆಂಟೀನಾ ಕಪ್ ಗೆದ್ದ ಬಳಿಕ ಸಂಭ್ರಮ ಸಂಘರ್ಷಕ್ಕೆ ತಿರುಗಿ ಮೂವರು ಗಾಯಗೊಂಡಿದ್ದಾರೆ.
ಕಣ್ಣೂರು ಪಲ್ಲಿಯನ್ಮೂಲದಲ್ಲಿ ನಡೆದ ವಿಜಯೋತ್ಸವದ ವೇಳೆ ಘರ್ಷಣೆ ನಡೆದಿದೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಸೋಮವಾರ ಮಧ್ಯರಾತ್ರಿ 12.40ರ ಸುಮಾರಿಗೆ ಈ ಘಟನೆ ನಡೆದಿದೆ. ಅರ್ಜೆಂಟೀನಾ ಪೆನಾಲ್ಟಿಯಲ್ಲಿ ಗೆದ್ದ ನಂತರ, ಫ್ರಾನ್ಸ್ ಮತ್ತು ಅರ್ಜೆಂಟೀನಾ ಅಭಿಮಾನಿಗಳ ನಡುವೆ ವಾಗ್ವಾದ ನಡೆಯಿತು ಮತ್ತು ಇದು ಸಂಘರ್ಷಕ್ಕೆ ಕಾರಣವಾಯಿತು. ಒಂದು ಗುಂಪು ಫ್ರಾನ್ಸ್ ಅಭಿಮಾನಿಗಳನ್ನು ಗೇಲಿ ಮಾಡಿದ್ದರಿಂದ ಸಂಘರ್ಷ ವಿಕೋಪಕ್ಕೆ ತಿರುಗಿತು.
ಅನುರಾಗ್, ಆದರ್ಶ್ ಮತ್ತು ಅಲೆಕ್ಸ್ ಆಂಟೋನಿ ಗಾಯಗೊಂಡಿದ್ದಾರೆ. ಇದರಲ್ಲಿ ಅನುರಾಗ್ ಸ್ಥಿತಿ ಗಂಭೀರವಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೋಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೋಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ಮೂವರನ್ನು ಎರಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿಂದೆ ಬ್ರೆಜಿಲ್ ವಿಶ್ವಕಪ್ ಪಂದ್ಯದಲ್ಲಿ ಸೋತಾಗ ಇದೇ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಆದರೆ ಯಾರಿಗೂ ಗಾಯಗಳಾಗಿಲ್ಲ. ಅದೇ ವೇಳೆ ಅವರು ಡ್ರಗ್ಸ್ ಬಳಸಿದ್ದಾರೆಯೇ ಎಂಬ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ಹಿಂಸಾಚಾರಕ್ಕೆ ತಿರುಗಿದ ಅಜೆರ್ಂಟೀನಾ ಅಭಿಮಾನಿಗಳ ಸಂಭ್ರಮ: ಕಣ್ಣೂರಿನಲ್ಲಿ ಮೂವರಿಗೆ ಗಾಯ: ಓರ್ವನ ಸ್ಥಿತಿ ಗಂಭೀರ
0
ಡಿಸೆಂಬರ್ 19, 2022