HEALTH TIPS

ಆನ್‌ಲೈನ್‌ ಪಾವತಿ ಯುಪಿಐನಲ್ಲಿ ಶೀಘ್ರ ಹೊಸ ವೈಶಿಷ್ಟ್ಯ

 

            ಮುಂಬೈ: ಆನ್‌ಲೈನ್‌ ಮೂಲಕ ಖರೀದಿಸಿದ ವಸ್ತು ಗ್ರಾಹಕರ ಕೈಸೇರಿದ ಬಳಿಕವೇ ಅವರ ಖಾತೆಯಿಂದ ಹಣವು ವ್ಯಾಪಾರಿಗೆ ಸಂದಾಯ ಆಗುವಂತಹ ವೈಶಿಷ್ಟ್ಯವು ಯುಪಿಐ ವೇದಿಕೆಯಲ್ಲಿ ಶೀಘ್ರದಲ್ಲೇ ಸಿಗಲಿದೆ.

                    ಯುಪಿಐ ವ್ಯವಸ್ಥೆಯಲ್ಲಿ 'ಸಿಂಗಲ್‌-ಬ್ಲಾಕ್‌-ಆಯಂಡ್‌-ಮಲ್ಟಿಪಲ್‌-ಡೆಬಿಟ್ಸ್‌' ಸೌಲಭ್ಯವನ್ನು ಪರಿಚಯಿಸಲು ನಿರ್ಧರಿಸ ಲಾಗಿದೆ.

ಇದರಿಂದಾಗಿ ಇ-ಕಾಮರ್ಸ್‌ ವೇದಿಕೆಗಳ ಮೂಲಕ ಖರೀದಿಸುವ ವಸ್ತುಗಳಿಗೆ ಪಾವತಿ ಮತ್ತು ಸಾಲಪತ್ರಗಳ ಮೇಲಿನ ಹೂಡಿಕೆಯು ಸುಲಭವಾಗಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

                 ವ್ಯಾಪಾರಿಗೆ ಪಾವತಿಸಬೇಕಿರುವ ನಿರ್ದಿಷ್ಟ ಮೊತ್ತವು ಗ್ರಾಹಕರ ಖಾತೆಯಲ್ಲಿ ಬ್ಲಾಕ್‌ ಆಗಿರುತ್ತದೆ. ಸರಕು ಅಥವಾ ಸೇವೆಯು ಗ್ರಾಹಕರ ಕೈ ಸೇರುವವರೆಗೂ ಆ ಮೊತ್ತವು ಗ್ರಾಹಕರ ಖಾತೆಯಲ್ಲಿಯೇ ಇರುತ್ತದೆ. ವಸ್ತು ಕೈಗೆ ಸಿಕ್ಕ ಬಳಿಕ ಹಣವನ್ನು ಗ್ರಾಹಕರ ಖಾತೆಯಿಂದ ವ್ಯಾಪಾರಿಯ ಖಾತೆಗೆ ವರ್ಗಾವಣೆ ಮಾಡುವ ಸೌಲಭ್ಯ ಇದು ಎಂದು ವಿವರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries