ಮುಂಬೈ: ಜಾಗತಿಕ ಮಟ್ಟದಲ್ಲಿ ಮತ್ತೆ ಸದ್ದು ಮಾಡುತ್ತಿರುವ ಕೊರೋನಾ ಸುದ್ದಿ ಸೆನ್ಸೆಕ್ಸ್ ಮೇಲೆ ಪರಿಣಾಮ ಉಂಟುಮಾಡಿದೆ.
ಕೋವಿಡ್ ನ ಹೊಸ ರೂಪಾಂತರಿಯ ಭೀತಿಯಿಂದಾಗಿ ಸೆನ್ಸೆಕ್ಸ್ 1,000 ಅಂಕಗಳಷ್ಟು ಕುಸಿತ
ಕಂಡಿದೆ. ಕೋವಿಡ್-19 ಪರಿಣಾಮದಿಂದ ಹೂಡಿಕೆದಾರರಲ್ಲಿ ಭೀತಿ ಮೂಡಿದ್ದು, ಸತತ 4 ನೇ ನೇರ
ಸೆಷನ್ ನಲ್ಲಿ ಹಾಗೂ ಮೂರು ತಿಂಗಳ ಅವಧಿಯಲ್ಲಿ ದಿನವೊಂದರಲ್ಲೇ ಅಧಿಕ ಕುಸಿತ
ದಾಖಲಾಗಿದೆ.
59,84.29 ಅಂಕಗಳೊಂದಿಗೆ ಸೆನ್ಸೆಕ್ಸ್ ಸೆಷನ್ ಮುಕ್ತಾಯಗೊಂಡಿದ್ದು 980.93 ಅಂಕಗಳಷ್ಟು ಅಥವಾ ಶೇ.1.61 ರಷ್ಟು ಇಳಿಕೆ ದಾಖಲಾಗಿದೆ ನಿಫ್ಟಿ 17,806.80 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.
ನಿಫ್ಟಿಯ 50 ಸ್ಟಾಕ್ ಗಳ ಪೈಕಿ ಅದಾನಿ ಪೋರ್ಟ್, ಅದಾನಿ ಎಂಟರ್ ಪ್ರೈಸಸ್, ಹಿಂಡಾಲ್ಕೊ, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್ ಸೆನ್ಸೆಕ್ಸ್ ನಲ್ಲಿ ಇಳಿಕೆ ಕಂಡ 5 ಪ್ರಮುಖ ನಷ್ಟದಾರ ಸಂಸ್ಥೆಗಳಾಗಿದ್ದರೆ, ಸಿಪ್ಲಾ, ಡಿವೀಸ್ ಲ್ಯಾಬ್ಸ್, ಟೈಟಾನ್ ಗಳು ಗಳಿಕೆ ಕಂಡಿವೆ.