ಕಣ್ಣೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಸಂದರ್ಶಕರ ಗ್ಯಾಲರಿಯಿಂದ ವಿಮಾನ ಟೇಕ್ ಆಫ್ ಮತ್ತು ಲ್ಯಾಂಡ್ ಆಗುವುದನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ಸಂದರ್ಶಕರ ಗ್ಯಾಲರಿ ಪ್ರವೇಶಕ್ಕೆ ಡಿ. 9ರ ವರೆಗೆ ಅನುಮತಿ ನೀಡಲಾಗಿದ್ದು, ಹಲವು ಶಿಕ್ಷಣ ಸಂಸ್ಥೆಗಳು ಇನ್ನು ವಿಚಾರಣೆ ಮುಂದುವರಿಸಿರುವ ಹಿನ್ನೆಲೆಯಲ್ಲಿ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಗ್ಯಾಲರಿಯಲ್ಲಿ ಕಡಿಮೆ ದರದ ಪ್ರವೇಶ ಅವಕಾಶವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ 25 ರೂ. ಮತ್ತು ಜೊತೆಯಲ್ಲಿರುವ ಸಿಬ್ಬಂದಿಗೆ ರೂ. 50 ಎಂಬ ದರದಲ್ಲಿ ಪ್ರವೇಶಾತಿಯನ್ನು ನೀಡಲಾಗುತ್ತದೆ. ವಿಮಾನ ನಿಲ್ದಾಣದ ವೀಕ್ಷಣೆಗೆ ಆಗಮಿಸುವ ಶಾಲೆ ಯಾ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿ ವಿವರಗಳಿಗೆ ಸಂಬಂಧಿಸಿ ಶಾಲಾ ಕಾಲೇಜಿನ ಸಂಬಂಧಪಟ್ಟ ಅಧಿಕಾರಿಗಳು ದೃಢೀಕರಿಸಿದ ಪತ್ರವನ್ನು ಜತೆಗೆ ತರಬೇಕು. ಭೇಟಿಯ ಸಮಯ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಇರಲಿದ್ದು, ಶಾಲಾ ಅಧಿಕಾರಿಗಳು ವಿಮಾನದ ನಿರ್ಗಮನ ಮತ್ತು ಲ್ಯಾಂಡಿಂಗ್ ಸಮಯವನ್ನು ಮುಂಚಿತವಾಗಿ ತಿಳಿದುಕೊಂಡು ವೇಳಾಪಟ್ಟಿಗೆ ತಕ್ಕಂತೆ ಸಮಯವನ್ನು ಕ್ರಮೀಕರಿಸಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0490 2481000)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕಣ್ಣೂರಿನ ವಿಮಾನ ನಿಲ್ದಾಣಕ್ಕೆ ಪ್ರವೇಶ-ಕಾಲಾವಕಾಶ ವಿಸ್ತರಣೆ
0
ಡಿಸೆಂಬರ್ 12, 2022
Tags