ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವ ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಸಾಂಸ್ಕøತಿಕ ಸಮಾರಂಭಗಳೊಂದಿಗೆ ನ. 29 ಮತ್ತು 30 ರಂದು ಸಂಪನಗೊಂಡಿತು.
ಪ್ರಥಮ ದಿನ ಅಭಿಷೇಕ ಪೂಜೆ, ಉಷಪೂಜೆ, ಗಣಹೋಮ, ಕಲಶಪೂಜೆ, ಶ್ರೀ ದೇವರಿಗೆ ಕಾಲಶಾಭಿಷೇಕ, ನವಕಾಭಿಷೇಕ, ಭಕ್ತರಿಂದ ತುಲಾಭಾರ ಸೇವೆ, ಮಧ್ಯಾಹ್ನ ಪೂಜೆ, ಪ್ರಸಾದ ಭೋಜನ ನಡೆಯಿತು. ರಾತ್ರಿ ಶ್ರೀ ಭೂತಬಲಿ, ಕೋಟೂರಿಗೆ ಕಟ್ಟೆ ಸವಾರಿಯಾಗಿ ಹಿಂದುರಿಗಿ ಬಂದ ಬಳಿಕ ಕಟ್ಟೆಪೂಜೆ, ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಯವರಿಂದ ಸಂಗೀತ ಸೇವೆ, ರಾಜಾಂಗಣದಲ್ಲಿ ನೃತ್ಯಸೇವೆ ಜರಗಿದವು. ಉತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿ ಮಲ್ಲ ಇವರಿಂದ ಯಕ್ಷಗಾನ ಬಯಲಾಟ ಸೇವೆ ಜರಗಿತು.
ದ್ವಿತೀಯ ದಿನ ಬೆಳಗ್ಗೆ ಅಭಿಷೇಕ ಪೂಜೆ, ಉಷಪೂಜೆ, ಶಿವೇಲಿ, ರಾಜಾಂಗಣದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಮಹಾ ಪೂಜೆ, ಮಂತ್ರಾಕ್ಷತೆ ಮತ್ತು ಪ್ರಸಾದ ಭೋಜನ ಜರಗಿದವು.
ಮಧ್ಯಾಹ್ನ ವಿಷ್ಣುಮೂರ್ತಿ ದೈವದ ಕೋಲ ಜರಗಿ ದೈವಾರಾಧನೆ ಸಂಪನ್ನವಾಯಿತು. ಶ್ರೀ ಗಿರೀಶ ಅಡಿಗ ಕರ್ಚೇರಿ ಅವರಿಂದ ದೇವರ ನೃತ್ಯಸೇವೆ, ದರ್ಶನಬಲಿ ಜರಗಿದವು. ರಾತ್ರಿ ಶ್ರೀರಂಗಪೂಜೆ ನೆರವೇರಿತು.
ಕ್ಷೇತ್ರ ಪ್ರಬಂಧಕ ಯನ್.ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಣೆ ಮಾಡಿದರು. ಶ್ರೀ ಕ್ಷೇತ್ರದ ಅರ್ಚಕ ಅನಂತಪದ್ಮನಾಭ ಮಯ್ಯ ವೈದಿಕ ವಿಭಾಗ ಕಾರ್ಯ ನಿರ್ವಹಣೆಯಲ್ಲಿ ಸಹಕರಿಸಿದರು.