ಕಾಸರಗೋಡು: ಕೇರಳ ಮೀನುಗಾರರ ಕಲ್ಯಾಣ ಮಂಡಳಿಯ ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಆಲಪ್ಪುಳ, ಎರ್ನಾಕುಳಂ, ತ್ರಿಶೂರ್, ಮಲಪ್ಪುರಂ ಜಿಲ್ಲೆಗಳಲ್ಲಿ ಖಾಲಿ ಇರುವ ಮೀನುಗಾರಿಕಾ ಅಧಿಕಾರಿ ಹುದ್ದೆಗಳಿಗೆ ಮತ್ತು ತ್ರಿಶೂರ್‍ನಲ್ಲಿರುವ ಸಹಾಯಕ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರಿ ಯಾ ಅರೆ ಸರ್ಕಾರಿ ಸೇವೆಯಲ್ಲಿ ಕ್ಲರ್ಕ್ ಅಥವಾ ಅದೇ ರೀತಿಯ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಇಲಾಖೆಯ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಬಹುದು. ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಪದವಿ ಹೊಂದಿದ್ದು, ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. 1 ಎಪ್ರಿಲ್ 2013ರ ನಂತರ ಸೇವೆಗೆ ಸೇರ್ಪಡೆಗೊಂಡವರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ನೌಕರರು ಬಯೋಡೇಟಾ, 144 ಕೆ.ಎಸ್.ಆರ್ ಭಾಗ-1 ಹೇಳಿಕೆ, ಒಪ್ಪಿಗೆ ಪತ್ರ ಮತ್ತು ಮೇಲಧಿಕಾರಿಗಳಿಂದ ದೃಢೀಕರಿಸಿ ನೀಡಿದ ಎನ್ ಒ ಸಿ ಎಂಬಿವುಗಳನ್ನು(3 ಪ್ರತಿಗಳು) ಡಿಸೆಂಬರ್ 31ರ ಮೊದಲು ನೀಡಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0487 2383053, 0487 2383088)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವಿಳಾಸ
Commissioner
Kerala Fisherman Welfare board
Poongunnam
Thrissur
Pin 680002
ಡೆಪ್ಯೂಟೇಶನ್ ನೇಮಕಾತಿಗಾಗಿ ಅರ್ಜಿ ಆಹ್ವಾನ
0
ಡಿಸೆಂಬರ್ 13, 2022
Tags