ತಿರುವನಂತಪುರಂ: ರಾಜಭವನದಲ್ಲಿ ನಡೆಯುವ ಕ್ರಿಸ್‍ಮಸ್ ಪಾರ್ಟಿಗೆ ಮುಖ್ಯಮಂತ್ರಿ ಹಾಗೂ ಇತರ ಸಚಿವರು ಬಾರದಿರುವುದು ಅವರ ನಿರ್ಧಾರ ಎಂದು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ.
ಅವರ ಬಾಗಿಲು ಯಾವಾಗಲೂ ತೆರೆದಿರುತ್ತದೆ, ಆದರೆ ಕಾನೂನಿನೊಳಗೆ ಎಂದು ಅವರು ಹೇಳಿದರು.
ತನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿಗಳಿಲ್ಲ, ರಾಜಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಎಲ್ಲರನ್ನೂ ಆಹ್ವಾನಿಸಿರುವೆ ಎಂದಿರುವರು. ರಾಜ್ಯಪಾಲರು ಕೇವಲ ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದಾರೆ ಮತ್ತು ರಾಜಕೀಯ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯಗಳನ್ನು ಅಕ್ರಮವಾಗಿ ಬಳಸಿಕೊಳ್ಳುವವರಿಂದ ಏನನ್ನೂ ಗಿಟ್ಟಿಸಲಾಗದು ಎಂದು ಪ್ರತಿಕ್ರಿಯಿಸಿದರು.
ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ಕೆಳಗಿಳಿಸಲು ವಿಧಾನಮಂಡಲ ಅಂಗೀಕರಿಸಿದ ವಿಧೇಯಕ ತಮಗೆ ಬಂದಿಲ್ಲ, ವಿಧೇಯಕ ನೋಡದೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.
ಕ್ರಿಸ್‍ಮಸ್ ಪಾರ್ಟಿಗೆ ಹಾಜರಾಗದಿರುವುದು ಅವರ ನಿರ್ಧಾರ: ರಾಜಭವನದ ಬಾಗಿಲು ತೆರೆದಿರಲಿದೆ: ರಾಜ್ಯಪಾಲರು
0
ಡಿಸೆಂಬರ್ 16, 2022