HEALTH TIPS

'ಕೇರಳ ಕಾರ್ಪೋರೇಟ್‍ಗಳನ್ನು ಕರೆದರೆ ತೊಂದರೆ ಇಲ್ಲ, ಆದರೆ ಕೇಂದ್ರವು ಅದೇ ಹೆಜ್ಜೆ ಇಟ್ಟರೆ ತಪ್ಪೆನ್ನು ವಾದ ಎಷ್ಟು ಸರಿ: ಬ್ರಿಟ್ಟಾಸ್ ರ ಬೆವರಿಳಿಸಿದ ನಿರ್ಮಲಾ ಸೀತಾರಾಮನ್

                     ನವದೆಹಲಿ: ವಿಝಿಂಜಂ ಬಂದರಿನ ವಿಚಾರ ಕೇರಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ನಡುವಿನ ಸೌಹಾರ್ದ ಸ್ಪರ್ಧೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
            ಅವರು ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕೇರಳದಲ್ಲಿ ಹಣದುಬ್ಬರವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಸಚಿವರು ರಾಜ್ಯವನ್ನು ಟೀಕಿಸಿದರು.
            ರಾಜ್ಯಸಭೆಯಲ್ಲಿ ಧನವಿನಿಯೋಗ ವಿಧೇಯಕ ಮೇಲಿನ ಚರ್ಚೆಗೆ ಉತ್ತರಿಸಿದ ಸಂದರ್ಭದಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ.
          ಸಿಪಿಎಂ ಸದಸ್ಯ ಜಾನ್ ಬ್ರಿಟ್ಟಾಸ್ ಆರೋಪಕ್ಕೆ ಪ್ರತಿಯಾಗಿ ವಿಝಿಂಜಂ ವಿಚಾರವಾಗಿ ಹಣಕಾಸು ಸಚಿವರ ಸದನದಲ್ಲಿ ಚರ್ಚೆ ನಡೆದಿದೆ. ರಾಜ್ಯಸಭೆ ಅಂಗೀಕರಿಸಿದ ಮಸೂದೆಯನ್ನು ಲೋಕಸಭೆಗೆ ವಾಪಸ್ ಕಳುಹಿಸಲಾಗಿತ್ತು. ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಕಾಪೆರ್Çರೇಟ್‍ಗಳ ಓಲೈಕೆ ಮಾಡುತ್ತಿದೆ ಎಂಬ ಆರೋಪಕ್ಕೆ ದಿಟ್ಟ ಉತ್ತರ ನೀಡಿದರು. ಎಲ್ಲರ ಅಭಿವದ್ಧಿ ನೀತಿಯ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇನೆಯೇ ಹೊರತು ಯಾರ ತುಷ್ಟೀಕರಣವೂ ಇಲ್ಲ ಎಂದು ಸಚಿವರು ತಿಳಿಸಿದರು.
         ವಿಝಿಂಜಂ ಬಂದರಿಗೆ ಕಾಂಗ್ರೆಸ್ ಮತ್ತು ಸಿಪಿಎಂ ಕಾಪೆರ್Çರೇಟ್ ಅನ್ನು ಹೇಗೆ ಆಹ್ವಾನಿಸಿತು ಎಂದು ಸಚಿವರು ಕೇಳಿದರು. ಇದು ಪಾರದರ್ಶಕ ಟೆಂಡರ್ ಪ್ರಕ್ರಿಯೆಯ ಮೂಲಕ ಎಂದು ಜಾನ್ ಬ್ರಿಟಾಸ್ ಹೇಳಿದರು. ಬ್ರಿಟಾಸ್ ಹೇಳಿದ್ದಕ್ಕೆ ಖುಷಿಯಾಗಿದೆ ಎಂದ ಸಚಿವರು, ಇದರಲ್ಲಿ ಏನಾದರೂ ತಪ್ಪಿದೆಯೇ ಎಂದು ಕೇಳಿದರು. "ನೀವು ಟೆಂಡರ್ ಪ್ರಕ್ರಿಯೆಯ ಮೂಲಕ ಕಾಪೆರ್Çರೇಟ್ ಅನ್ನು ಆಹ್ವಾನಿಸಿದಾಗ ಯಾವುದೇ ಸಮಸ್ಯೆ ಇಲ್ಲ. ಆದರೆ ಕೇಂದ್ರ ಇದೇ ಹೆಜ್ಜೆ ಇಟ್ಟರೆ ನೀವು ಅಂಬಾನಿ, ಅದಾನಿಗಳಿಗೆ ಕೊಟ್ಟಿದ್ದೀರಿ ಎಂದು ಆರೋಪಿಸುತ್ತೀರಿ. ರಾಜಸ್ಥಾನ ಮತ್ತಿತರ ರಾಜ್ಯಗಳು ಹೀಗಿವೆ ಎಂದು ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದರು.
            ಬೆಲೆ ಏರಿಕೆ ಹಗಲು ದರೋಡೆ ಎಂಬ ಬ್ರಿಟ್ಟಾಸ್ ಹೇಳಿಕೆಗೆ ಸಚಿವರು ಪ್ರತಿಕ್ರಿಯಿಸಿದರು. ಕೇರಳದಲ್ಲಿ 5.9 ಪ್ರತಿಶತದಷ್ಟು ಬೆಲೆ ಏರಿಕೆಯಾಗಿದೆ ಮತ್ತು ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಸಚಿವರು ಬೊಟ್ಟುಮಾಡಿ ಬ್ರಿಟ್ಟಾಸ್ ರ ಬೆವರಿಳಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries