ಕಾಸರಗೋಡು: ರೋಚಕ ಫಿಫಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ಗೆಲುವು ಸಾಧಿಸುತ್ತಿದ್ದಂತೆ ಕೇರಳಾದ್ಯಂತ ಎರಡೂ ತಂಡಗಳ ಅಭಿಮಾನಿಗಳ ಮಧ್ಯೆ ಹೊಡೆದಟ, ಇರಿತ ಪ್ರಕರಣ ನಡೆದಿದೆ.
ಉಪ್ಪಳದಲ್ಲಿ ರಸ್ತೆ ತಡೆ:
ಫೈನಲ್ ಪಂದ್ಯಾಟ ರೋಚಕ ಅಂತ್ಯ ಕಾಣುತ್ತಿದ್ದಂತೆ ಎರಡೂ ದೇಶಗಳ ಫುಟ್ಬಾಲ್ ಆರಾಧಕರು ಉಪ್ಪಳ ಪೇಟೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದ್ದಾರೆ. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಗಿದೆ. ಪರಿಸ್ಥಿತಿ ನಿಭಾಯಿಸಲು ಸ್ಥಳಕ್ಕಾಗಮಿಸಿದ ಪೊಲೀಸರಿಗೂ ರಸ್ತೆ ತಡೆ ಬಿಸಿ ತಟ್ಟಿದ್ದು, ಒಬ್ಬನನ್ನು ಬಂಧಿಸಿ, 14ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಸೋಂಕಾಲು ನಿವಾಸಿ ಅಬ್ದುಲ್ಲ ಬಂಧಿತ. ಉದ್ದೇಶಪೂರ್ವಕವಾಗಿ ಪೊಲೀಸ್ ವಾಹನಕ್ಕೆ ತಡೆಯೊಡ್ಡಲಾಗಿತ್ತು.
ಫುಟ್ಬಲ್ ವಿಜಯೋತ್ಸವ-ವಿವಿಧೆಡೆ ಘರ್ಷಣೆ, ಚೂರಿ ಇರಿತ: ಉಪ್ಪಳದಲ್ಲಿ ರಸ್ತೆ ತಡೆ
0
ಡಿಸೆಂಬರ್ 19, 2022
Tags