ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡಿರುವ ಓಮಿಕ್ರಾನ್ ಹೊಸ ರೂಪಾಂತರಿಗಳಾದ XBB ಮತ್ತು BF.7 ವಿಶ್ವವನ್ನೇ ತಲ್ಲಣಗೊಳಿಸಿವೆ. ಆದರೆ ಭಾರತದಲ್ಲಿ ಈ ಉಪ ತಳಿಗಳು ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಈಗಾಗಲೇ ಬಿಎಫ್.7ನ ಕೆಲವು ಪ್ರಕರಣಗಳು ಭಾರತಗಲ್ಲಿ ವರದಿಯಾಗಿವೆ. ಆದರೆ ಅವುಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿಲ್ಲ. ಹೀಗಾಗಿ ಸದ್ಯಕ್ಕೆ ಭಾರತದಲ್ಲಿ ಕೊರೋನಾ ಉಲ್ಬಣವಾಗುತ್ತದೆ ಎಂದು ನಿರೀಕ್ಷಿಸಬೇಡಿ ಎಂದು ಖ್ಯಾತ ವೈರಾಲಜಿಸ್ಟ್ ಗಂಗನ್‌ದೀಪ್ ಕಂಗ್ ಅವರು ಶುಕ್ರವಾರ ಹೇಳಿದ್ದಾರೆ.
BF-.7, ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಕೊರೋನಾ ವೈರಸ್ ಭಾರೀ ಪ್ರಮಾಣದಲ್ಲಿ ಹರಡುವಂತೆ ಮಾಡಿದ್ದು, ಇದರಿಂದ ಆತಂಕಗೊಂಡಿರುವ ಭಾರತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿದೆ.
flipboardfacebooktwitterwhatsappNext