ಮಧೂರು: ಸೂರ್ಲು ಗುಡ್ಡೆಮನೆ ದೈವಸ್ಥಾನದ ಪ್ರತಿಷ್ಠಾಕಲಶ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಭಾನುವಾರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ಮಾರ್ಗದರ್ಶನದಲ್ಲಿ ನೆರವೇರಿತು.
ರಾಧಾಕೃಷ್ಣ ಸೂರ್ಲು ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಬು ಗುರುಸ್ವಾಮಿ, ನಗರಸಭಾ ಸದಸ್ಯ ಪಿ ರಮೇಶ್, ಧಾರ್ಮಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ, ಕೊರಕ್ಕೊಡ್ ತರವಾಡಿನ ವಸಂತ ಪೂಜಾರಿ, ಉದ್ಯಮಿ ಕೆ. ಸುರೇಶ್, ದಿನೇಶ್ ಎಂ.ಟಿ., ಹರೀಶ್ ಕೋಟೆಕಣಿ ಮೊದಲಾದವರು ಪಾಲ್ಗೊಂಡಿದ್ದರು. ತಿಲಕ್ ಪೂಜಾರಿ ಸ್ವಾಗತಿಸಿ, ಹರೀಶ್ ಕೆ.ಆರ್.ವಂದಿಸಿದರು.