ಕಾಸರಗೋಡು: ಕೋಟೆಯನ್ನು ಕಟ್ಟಿ ಕಾಯ್ದ ರಾಮರಾಜ ಕ್ಷತ್ರಿಯರು ಕನ್ನಡವನ್ನು ಕಾಯ್ದುಕೊಂಡ ಜನಾಂಗ. ಕಾಸರಗೋಡಿನ ಹೊಸದುರ್ಗದ ವರೆಗೆ ಈಗಲೂ ಕನ್ನಡವನ್ನು ಉಳಿಸಿಕೊಂಡು ಬಂದಿದ್ದಾರೆ. ಶಿಸ್ತು ಮತ್ತು ಪ್ರಾಮಾಣಿಕತೆಗೆ ಹೆಸರಾದ ಈ ಜನಾಂಗದವರು ಸೇನೆ ಮತ್ತು ಪೆÇಲೀಸ್ ಇಲಾಖೆಯಲ್ಲಿ ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿದ್ದು, ಪ್ರಾಮಾಣಿಕತೆಗೆ ಶಾಕ್ಷಿಯಾಗಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಥಾಪಿತ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ 90 ನೇ ವಾರ್ಷಿಕ ಸಂಭ್ರಮ ಮತ್ತು ಮಹಿಳಾ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸ್ವಾಮೀಜಿಯವರು ಆಶೀರ್ವಚನವಿತ್ತರು.
ವಾರ್ಷಿಕ ಸಂಭ್ರಮ ಸಮಿತಿ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಡಾ.ಶಿವಾನಂದ ಬೇಕಲ್, ಜಿಲ್ಲಾ ಸಂಘದ ಮಾಜಿ ಕಾರ್ಯದರ್ಶಿ ಲೋಕೇಶ್ ಅಣಂಗೂರು ಹಿತನುಡಿಗಳನ್ನಾಡಿದರು. ಜಿಲ್ಲಾ ಸಂಘದ ಗೌರವ ಅಧ್ಯಕ್ಷ ನಿರಂಜನ ಕೊರಕೋಡು, ಗೌರವ ಕಾರ್ಯದರ್ಶಿ ಬಿ.ಪಿ.ವೆಂಕಟ್ರಮಣ ಗೌರವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ.ಕನ್ನಡ ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್‍ಬೈಲ್, ವಿಶ್ವ ರಾಮ ಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಶಶಿಧರ್ ನಾಯಕ್, ಸಂಘಟನಾ ಕಾರ್ಯದರ್ಶಿ ಸುರೇಶ್ ಬಿಜೂರು, ರಾಮಕ್ಷತ್ರಿಯ ಮಾಸಪತ್ರಿಕೆ ಸಂಪಾದಕ ಬಿ.ಎಂ.ನಾಥ್ ಬೈಂದೂರು, ನವದೆಹಲಿಯ ಎಂಜಿನಿಯರ್ಸ್ ಇಂಡಿಯಾ ಲಿ. ಜನರಲ್ ಮೆನೇಜರ್ ಬೀನಾ ಸಂಜಯ್, ರಾಮಕ್ಷತ್ರಿಯ ಸಂಘ ಯುಎಇ ಪೂರ್ವ ಅಧ್ಯಕ್ಷ ಮಂಜುನಾಥ ಹೊನ್ನೆಮೂಲೆ, ಮಂಗಳೂರಿನ ಅಭಿಜ್ಞ್ಯ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಅಭಿಲಾಷ್ ಕ್ಷತ್ರಿಯ, ಕುಂದಾಪುರದ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ನಾಗರಾಜ್ ಕಾಮಧೇನು, ವಿಶ್ವ ರಾಮಕ್ಷತ್ರಿಯ ಮಹಾಸಂಘದ ಕಾನೂನು ಸಲಹೆಗಾರರಾದ ಯು.ಕರುಣಾಕರ ರಾವ್ ಉಪಸ್ಥಿತರಿದ್ದರು. ಅತಿಥಿಗಳಾಗಿ ರಾಮಕ್ಷತ್ರಿಯ ಸಂಘ ಮಂಗಳೂರು ಅಧ್ಯಕ್ಷ ರವೀಂದ್ರ ಕೆ, ಮೂಡಬಿದ್ರೆ ಅಧ್ಯಕ್ಷ ಸುರೇಂದ್ರ ಅತ್ತಾವರ, ಬೆಳ್ತಂಗಡಿ ಅಧ್ಯಕ್ಷ ಚಂದ್ರಕಾಂತ ಬಿ, ಪುತ್ತೂರು ಅಧ್ಯಕ್ಷ ಸುರೇಶ್, ಬಂಟ್ವಾಳ ಅಧ್ಯಕ್ಷ ಸಿ.ಎಚ್.ಗಣಪತಿ ಮೊದಲಾದವರು ಉಪಸ್ಥಿತರಿದ್ದರು. ಉಪಸಂಘಗಳ ಅಧ್ಯಕ್ಷರುಗಳಾದ ಎಚ್.ಬಿ.ಪ್ರಭಾಶಂಕರ ರಾವ್, ಸುಬ್ರಾಯ ರಾವ್ ಕೆ, ಸುಭಾನಂದ ಕೀಕಾನ, ರಮೇಶ್ ನಾಯ್ಕರಹಿತ್ಲು, ಕೆ.ಪ್ರಭಾಕರ ಕಂಪೌಂಡರ್, ದೇವದಾಸ್ ಮುದಿಯಕ್ಕಾಲು, ಹರಿಶ್ಚಂದ್ರ ಸಿ.ಎಚ್, ವಿದ್ಯಾನಂದ ಹೂಡೆ, ಕಮಲಾಕ್ಷ ಕೆ.ಅಣಂಗೂರು, ಸತೀಶ್ ಬಿ.ಕೂಡ್ಲು, ರಮೇಶ್ ಕುದ್ರೆಕೋಡು ಮೊದಲಾದವರು ಉಪಸ್ಥಿತರಿದ್ದರು.
ಸಂಭ್ರಮ ಸಮಿತಿ ಕಾರ್ಯದರ್ಶಿ ಪ್ರದೀಪ್ ಬೇಕಲ್ ಸ್ವಾಗತಿಸಿದರು. ಜಿಲ್ಲಾ ಸಂಘದ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಭ್ರಮ ಸಮಿತಿ ಜೊತೆ ಕಾರ್ಯದರ್ಶಿ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಸಂಘದ ಸದಸ್ಯ ಚಂದ್ರಶೇಖರ್ ಮಾಸ್ತರ್ ವಂದಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.
ರಾಮರಾಜ ಕ್ಷತ್ರಿಯರು ಕನ್ನಡವನ್ನು ಕಾಯ್ದುಕೊಂಡ ಜನಾಂಗ : ಎಡನೀರು ಶ್ರೀ
0
ಡಿಸೆಂಬರ್ 27, 2022