ಬದಿಯಡ್ಕ: ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಬ್ರಹ್ಮಕಲಶ ಪ್ರಯುಕ್ತ ವಾಹನ ಪ್ರಚಾರಕ್ಕೆ ಬುಧವಾರ ಬೆಳಗ್ಗೆ ಚಾಲನೆ ನೀಡಲಾಯಿತು. ಪ್ರಧಾನ ಅರ್ಚಕ ಎ.ಜಿ.ಐತಾಳ್ ಶ್ರೀ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಮಾಸ್ತರ್ ಅವರು ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ಅವರು ಧ್ವಜ ಹಸ್ತಾಂತರಿಸಿದರು. ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಚಂದ್ರಶೇಖರ್ ಕುರುಪ್ ಮಾಸ್ತರ್, ಶಶಿಧರ ತೆಕ್ಕೆಮೂಲೆ, ಚಂದ್ರಮಾಸ್ತರ್, ಸೂರ್ಯ ಕಜಮಲೆ, ನಾರಾಯಣ, ಸುನಿಲ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು. ಡಿ. 25ರಿಂದ ಜ.2ರ ತನಕ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ದೇಲಂಪಾಡಿ ಗಣೇಶತಂತ್ರಿಗಳವರ ತಾಂತ್ರಿಕತ್ವದಲ್ಲಿ ನಡೆಯಲಿರುವುದು. ಪ್ರತೀದಿನ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು, ಬೃಹತ್ ವಸ್ತುಪ್ರದರ್ಶನ ಮಳಿಗೆ ಇರುವುದು.
ಉಬ್ರಂಗಳ ಬ್ರಹ್ಮಕಲಶ ; ವಾಹನ ಪ್ರಚಾರ ಆರಂಭ
0
ಡಿಸೆಂಬರ್ 21, 2022