ಡೆಹ್ರಾಡೂನ್: ಚಳಿಗಾಲದಲ್ಲಿ ಹಿಮದಿಂದ ಆವೃತವಾಗಿರುವ ಕೇದಾರನಾಥ ಮತ್ತು ಬದ್ರಿನಾಥ ದೇವಾಲಯಗಳ ಸುತ್ತಲೂ ಕಟ್ಟೆಚ್ಚರ ವಹಿಸಲು ಭಾರತ- ಟಿಬೆಟ್ ಗಡಿ ಪೊಲೀಸರನ್ನು (ಐಟಿಬಿಪಿ) ನಿಯೋಜಿಸಲಾಗಿದೆ ಎಂದು ದೇವಾಲಯದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕೇದಾರನಾಥ ದೇವಾಲಯದ ಹೊರ ಗೋಡೆಗೆ ಚಿನ್ನದ ಲೇಪನ ಮಾಡಲಾಗಿದೆ. ಚಳಿಗಾಲದಲ್ಲಿ ದೇವಾಲಯದ ಬಳಿ ಎತ್ತರ ಪ್ರದೇಶದಲ್ಲಿರುವ ನಿವಾಸಿಗಳು, ಕಡಿಮೆ ಹಿಮ ಬೀಳುವ ಕಡೆ ಸ್ಥಳಾಂತರಗೊಳ್ಳುತ್ತಾರೆ. ಆದ್ದರಿಂದ ಭದ್ರತಾ ದೃಷ್ಟಿಯಿಂದ ದೇವಾಲಯಕ್ಕೆ ಐಟಿಬಿಪಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಗೃಹ ಸಚಿವಾಲಯವನ್ನು ವಿನಂತಿಸಲಾಗಿತ್ತು. ಈಗ ಅದಕ್ಕೆ ಅನುಮೋದನೆ ದೊರಕಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ತಿಳಿಸಿದ್ದಾರೆ.