ಕುಂಬಳೆ: ಕುಂಬಳೆ ಮತ್ತು ಮಂಜೇಶ್ವರ ಉಪಜಿಲ್ಲೆಯ ಪ್ರೌಢಶಾಲಾ ಎಸ್‍ಐಟಿಸಿ ಅಂಕಗಳಿರುವ ಮೂರು ದಿನಗಳ ಟೆಕ್ಕಿ ಶಿಕ್ಷಕರ ತರಬೇತಿ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.
ಸಮಗ್ರ ಶಿಕ್ಷಾ ಕೇರಳ, ಕಾಸರಗೋಡು ಮತ್ತು ಕೈಟ್ ಕಾಸರಗೋಡು ಇವರ ಜಂಟಿ ಆಶ್ರಯದಲ್ಲಿ ಕುಂಬಳೆ ಬ್ಲಾಕ್ ಕಾರ್ಯನಿರೂಪಣಾಧಿಕಾರಿ ಜಯರಾಮ ಜೆ ರವರ ಅಧ್ಯಕ್ಷತೆಯಲ್ಲಿ ಪ್ರಾಂಶುಪಾಲ ದಿವಾಕರನ್. ಕೆ ಉದ್ಘಾಟಿಸಿದರು. ಕನಕಮ್ಮ ಕೆ (ಪ್ರಭಾರ ಮುಖ್ಯೋಪಾಧ್ಯಾಯಿನಿ), ಪ್ರವೀಣ್ ಕುಮಾರ್ (ಕೈಟ್ ಜಿಲ್ಲಾ ಸಂಯೋಜಕ) ಮತ್ತಿತರರು ಮಾತನಾಡಿದರು. ಕಾಸರಗೋಡು ಡಿಪಿಸಿ ನಾರಾಯಣ ಡಿ, ರಾಜೇಶ್ ಎಂಪಿ (ಐಟಿ ಕಾಸರಗೋಡು ಜಿಲ್ಲಾ ಸಂಯೋಜಕರು) ಮೊದಲಾದವರು ತರಬೇತಿ ಶಿಬಿರದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ವಿವಿಧ ಶಾಲೆಗಳ 37 ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದರು. ಸಿ.ಆರ್.ಸಿ.ಸಿ ಸುಶೀಲಾ ಕೆ ಸ್ವಾಗತಿಸಿ ಆರ್‍ಪಿ ಪ್ರಿಯಾ ಸಿಎಚ್ ವಂದಿಸಿದರು.
ಟೆಕ್ಕಿ : ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ
0
ಡಿಸೆಂಬರ್ 19, 2022
Tags