ಪೆರ್ಲ: ಪೆರ್ಲದ ಶಾರದಾ ಮರಾಟಿ ಸಮಾಜ ಸೇವಾ ಸಂಘ ಹಾಗೂ ಮಹಿಳಾ ವೇದಿಕೆ , ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಪೆರ್ಲ ಇದರ ಸಹಯೋಗದೊಂದಿಗೆ ಮರಾಟಿ ಬೋಡಿರ್ಂಗ್ ಹಾಲ್ ನ ನೇತೃತ್ವದಲ್ಲಿ ಇತ್ತೀಚೆಗೆ ವಿದ್ಯುತ್ ಅಘಾತಕ್ಕೆ ಬಲಿಯಾದ ವಿದ್ಯಾರ್ಥಿ ಜಿತೇಶ್ ಸಾಯ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನುಡಿದರು. ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಬಾರಿಕ್ಕಡು ಮಹಿಳಾ ಸಂಘದ ಅಧ್ಯಕ್ಷೆ ಪುμÁ್ಪ ಅಮೆಕ್ಕಳ, ಡಾ.ಬಿ.ಶಿವ ನಾಯ್ಕ್ ಬಾಳೆಗುಳಿ,ಗೋಪಿಕೃಷ್ಣ ಬದಿಯಡ್ಕ,ಕೃಷ್ಣ ನಾಯ್ಕ ಗೋಳಿತ್ತಡ್ಕ, ವಾರಿಜ ಸಾಯ,ಹೇಮಂತ್ ಬದಿಯಡ್ಕ,ಸೇಸು ನಾಯ್ಕ ಸಾಯ, ಹರೀಶ್ಚಂದ್ರ ನಾಯ್ಕ ಸಾಯ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಮರಾಟಿ ಬೋಡಿರ್ಂಗ್ ನ ವತಿಯಿಂದ ಮೂರು ಸಂಘಗಳ ಹಾಗೂ ಕೊಡುಗೈ ದಾನಿಗಳಾದ ಸಮಾಜ ಬಾಂಧವರ ಸಹಕಾರದಲ್ಲಿ ಸಂಗ್ರಹಿಸಿದ ಆರ್ಥಿಕ ಮೊತ್ತ 35 ಸಾವಿರದ ಒಂದು ರೂ.ವಿನ ಚೆಕ್ ಜಿತೇಶ್ ರ ತಂದೆ ನಾರಾಯಣ ನಾಯ್ಕ್ ಅವರಿಗೆ ಹಸ್ತಾಂತರಿಸಲಾಯಿತು.
ವಿದ್ಯುತ್ ಅಘಾತಕ್ಕೆ ಬಲಿಯಾದ ವಿದ್ಯಾರ್ಥಿ ಜಿತೇಶ್ ಸಾಯ ಕುಟುಂಬಕ್ಕೆ ಸಾಂತ್ವನ - ಸಹಾಯ ಧನ ಹಸ್ತಾಂತರ
0
ಡಿಸೆಂಬರ್ 04, 2022
Tags