ಗುವಾಹಟಿ: ಪ್ರೇಯಸಿ ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ನೊಂದ 27ರ ಹರೆಯದ ಯುವಕನೋರ್ವ ಫೇಸ್ ಬುಕ್ ಲ್ಲಿ ಲೈವ್ ಆಗಿರುವಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ವೈದ್ಯಕೀಯ ಮಾರಾಟ ಪ್ರತಿನಿಧಿ ಜಯದೀಪ್ ರಾಯ್ ಸೋಮವಾರ ಸಿಲ್ಚಾರ್ನಲ್ಲಿಯ ತನ್ನ ಬಾಡಿಗೆ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
'ಪ್ರೇಯಸಿ ಮದುವೆಗೆ ನಿರಾಕರಿಸಿದ ಬಳಿಕ ನನ್ನ ಬಳಿ ಬಂದಿದ್ದ ಆಕೆಯ ಚಿಕ್ಕಪ್ಪ ಈ ಸಂಬಂಧದಿಂದಾಗಿ ತಾವು ಆಕೆಯನ್ನು ಕೊಲ್ಲುವುದಾಗಿ ಹೇಳಿದ್ದ. ಆಕೆಗೆ ನನ್ನಿಂದಾಗಿ ತೊಂದರೆಯಾಗಬಾರದು,ಹೀಗಾಗಿ ನಾನೇ ಈ ಜಗತ್ತನ್ನು ತೊರೆಯುತ್ತಿದ್ದೇನೆ ' ಎಂದು ರಾಯ್ ಫೇಸ್ಬುಕ್ನಲ್ಲಿ ಲೈವ್ ಆಗಿ ಹೇಳಿಕೊಂಡಿದ್ದ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.