ಬದಿಯಡ್ಕ: ಇತ್ತೀಚೆಗೆ ಚಾಯೋತ್ ನಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ. ಸಂಸ್ಕೃತ ಪ್ರಭಾಷಣಂನಲ್ಲಿ ಒಂಬತ್ತನೇ ತರಗತಿಯ ಅನಿರುದ್ಧ ಕೆ.ಎನ್, ಹಿಂದಿ ಉಪನ್ಯಾಸ ರಚನೆಯಲ್ಲಿ ಹತ್ತನೇ ತರಗತಿಯ ಸುದರ್ಶನ. ಕೆ, ಸಂಸ್ಕೃತ ಸಮಸ್ಯಾಪೂರಣದಲ್ಲಿ ಹತ್ತನೇ ತರಗತಿಯ ಅನಿಕೇತ್ ಸುಬ್ರಾಯ ಭಟ್, ಸಂಸ್ಕೃತ ಪ್ರಶ್ನೋತ್ತರಿಯಲ್ಲಿ ಹತ್ತನೇ ತರಗತಿಯ ವರದರಾಜ ಕೆ.ಆರ್, ಕನ್ನಡ ಕಂಠಪಾಠ ಮತ್ತು ಸಂಸ್ಕೃತ ಗಾನಾಲಾಪನಂ ಸ್ಪರ್ಧೆಗಳಲ್ಲಿ ಒಂಬತ್ತನೇ ತರಗತಿಯ ಅನ್ವಿತಾ ಟಿ. ಪ್ರಥಮ ಸ್ಥಾನ ಗಳಿಸಿ ಜನವರಿಯಲ್ಲಿ ಕಲ್ಲಿಕೋಟೆಯಲ್ಲಿ ರಾಜ್ಯ ಕಲೋತ್ಸವದಲ್ಲಿ ಸ್ಪರ್ಧಿಸಲಿದ್ದಾರೆ. ಉತ್ತಮ ಸಾಧನೆ ಪ್ರದರ್ಶಿಸಿದ ಈ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ಶಾಲಾ ಕಲೋತ್ಸವ: ರಾಜ್ಯ ಮಟ್ಟಕ್ಕೆ ಆಯ್ಕೆ
0
ಡಿಸೆಂಬರ್ 07, 2022
Tags