ಮಂಜೇಶ್ವರ: ಪಾವೂರು ಸಮೀಪದ ಗೋವಿಂದಲಚ್ಚಿಲ್ ಎಂಬಲ್ಲಿರುವ ಶ್ರೀ ಕೊರಗತನಿಯ ದೈವದ ಪ್ರತಿಷ್ಠಾ ಕಲಶಾಭಿμÉೀಕ ಇಂದು(ಜ.1) ವರ್ಕಾಡಿ ಬ್ರಹ್ಮಶ್ರೀ ದಿನೇಶ್ ಕೃಷ್ಣ ತಂತ್ರಿಯವರ ದಿವ್ಯಹಸ್ತದಿಂದ ಬೆಳಿಗ್ಗೆ 10.43ರ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ನಡೆಯಲಿದೆ.
ಶನಿವಾರ ಪರಿಗ್ರಹ, ಪ್ರಾಸಾದ ಸುದ್ದಿ, ವಾಸ್ತು ಪೂಜೆ, ವಾಸ್ತುಹೋಮ, ದಿಕ್ಪಾಲಬಲಿ, ಬಿಂಬಶುದ್ಧಿ, ಅದಿವಾಸ ನಡೆಯಿತು. ಇಂದು ಬೆಳಿಗ್ಗೆ ಗಣಪತಿ ಹೋಮ, ಕಲಶ ಪೂಜೆ, ಪ್ರಧಾನ ಹೋಮ, ನಂತರ 10:43ರ ಶುಭಮುಹೂರ್ತದಲ್ಲಿ ಶ್ರೀ ಕೊರಗತನಿಯ ದೈವದ ಪ್ರತಿಷ್ಠಾಕಲಶಾಭಿಷೇಕ ನಡೆಯಲಿರುವುದು. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ನಂತರ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಯವರಿಂದ ಆಶೀರ್ವಚನ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ, ಸಂಜೆ 4:ಕ್ಕೆ ಶ್ರೀ ಅನಂತ ಪದ್ಮನಾಭ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 6 ಕ್ಕೆ ಕೊರಗತನಿಯ ದೈವದ ಕೋಲ ನಡೆಯಲಿದೆ.
ಕೊರಗತನಿಯ ದೈವದ ಕಲಶಾಭಿಷೇಕ ಹಾಗೂ ಕೋಲೋತ್ಸವ ಇಂದು
0
ಡಿಸೆಂಬರ್ 31, 2022
Tags