ಬದಿಯಡ್ಕ: ಯಕ್ಷಗಾನ, ಮೃದಂಗಾದನ, ಕರಾಟೆ,ಕ್ರೀಡೆ, ಸಾಹಿತ್ಯ, ಭಜನೆ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಬಹುಮುಖ ಪ್ರತಿಭೆ ಚಿತ್ತರಂಜನ್ ಕಡಂದೇಲು ಅವರನ್ನು ಕೇರಳ ರಾಜ್ಯ ಹಿರಿಯ ನಾಗರಿಕರ ವೇದಿಕೆಯ ಬದಿಯಡ್ಕ ಘಟಕದ ಹಾಗೂ ಬೆಂಗಳೂರಿನ ಕೆದಿಲ್ಲಾಯ ಪ್ರತಿಷ್ಠಾನದ ಕಾಸರಗೋಡು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷೆ ಶಾಂತಾ ಬಿ ಅವರು ಶಾಲು ಹೊದೆಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು.
ಬದಿಯಡ್ಕ ನವಜೀವನ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯಾದ ಚಿತ್ತರಂಜನ್ ಕಡಂದೇಲು ಕವಯಿತ್ರಿ ,ಅಧ್ಯಾಪಿಕೆ ಜ್ಯೋತ್ಸ್ನಾ ಹಾಗೂ ಹರೀಶ್ ಕಡಂದೇಲು ದಂಪತಿಯ ಸುಪುತ್ರ. ಕೇರಳ ಶಾಲಾ ಕಲೋತ್ಸವದಲ್ಲಿ ಜಿಲ್ಲಾಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ಹಾಗೂ ಗಣಿತ ಸೆಮಿನಾರಿನಲ್ಲಿ ಪ್ರಥಮಸ್ಥಾನವನ್ನು ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿರುವ ಪ್ರತಿಭೆ.
ರಾಜ್ಯ ಹಿರಿಯ ನಾಗರಿಕರ ವೇದಿಕೆಯಬದಿಯಡ್ಕ ಘಟಕದ ಅಧ್ಯಕ್ಷ ಈಶ್ವರ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮುಖಂಡ ಪಿ.ಜಿ.ಚಂದ್ರಹಾಸ ರೈ, ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್, ಕೆದಿಲಾಯ ಪ್ರತಿಷ್ಠಾನದ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷೆ ಪ್ರಭಾವತಿ ಕೆದಿಲ್ಲಾಯ ಪುಂಡೂರು ಹಾಗೂ ಬಾಲಕೃಷ್ಣ ಪದ್ಮಾರ್, ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಉಪಸ್ಥಿತರಿದ್ದರು. ಕೇರಳ ರಾಜ್ಯದ ಹಿರಿಯ ನಾಗರಿಕರ ವೇದಿಕೆಯ ಕಾರ್ಯದರ್ಶಿ ಸಂಪತ್ತಿಲ ಶಂಕರನಾರಾಯಣ ಭಟ್ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಚಿತ್ತರಂಜನ್ ಭಾವಗೀತೆ ಹಾಗೂ ಭಕ್ತಿಗೀತೆಗಳ ಗಾಯನವನ್ನು ನಡೆಸಿಕೊಟ್ಟರು.
ಬಹುಮುಖ ಪ್ರತಿಭೆ ಚಿತ್ತರಂಜನ್ ಕಡಂದೇಲು: ಸನ್ಮಾನ
0
ಡಿಸೆಂಬರ್ 31, 2022