ನವದೆಹಲಿ:ದಶಕಗಳಿಂದ ಸ್ಥಗಿತಗೊಂಡಿರುವ ಕರ್ನಾಟಕದ ಕೋಲಾ ರದ ಚಿನ್ನದ ಗಣಿ (ಕೆಜಿಎಫ್) ಗಳಲ್ಲಿ ಸಂಸ್ಕರಿಸಿದ ಬಳಿಕ ತ್ಯಜಿಸಲ್ಪಟ್ಟ 5 ಕೋಟಿ ಟನ್ ಆದಿರಿನಲ್ಲಿ ಉಳಿದುಕೊಂಡಿರುವ ಚಿನ್ನವನ್ನು ತೆಗೆಯುವುದಕ್ಕಾಗಿ ಬಿಡ್‌ಗಳನ್ನು ಆಹ್ವಾನಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿದೆ.
2.1 ಶತಕೋಟಿ ಡಾಲರ್ ಮೌಲ್ಯದ ಚಿನ್ನದ ನಿಕ್ಷೇಪವಿದ್ದ ಕೋಲಾರದ ಚಿನ್ನದ ಗಣಿಯನ್ನು 20 ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಆ ಗಣಿಗಳಲ್ಲಿ ಚಿನ್ನವನ್ನು ಸಂಸ್ಕರಿಸಿದ ಬಳಿಕ ಅಲ್ಲಿಯೇ ತ್ಯಜಿಸಲ್ಪಟ್ಟಿರುವ ಅದಿರಿನಿಂದ ಶುದ್ಧ ಚಿನ್ನ ಪಡೆ ಯಲು ಸಾಧ್ಯವಾಗುವಂತಹ ನೂತನ ತಂತ್ರಜ್ಞಾನದ ಸದುಪಯೋಗವನ್ನು ಪಡೆಯಲು ಭಾರತ ಉತ್ಸುಕವಾಗಿದೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ರಾಯ್ಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸಂಸ್ಕರಿಸಲ್ಪಟ್ಟ ಅದಿರಿನಿಂದ ಚಿನ್ನದ ಜೊತೆಗೆ ಪೆಲೆಡಿಯಂ ಎಂಬ ಲೋಹವನ್ನು ಕೂಡಾ ತೆಗೆಯುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆಯೆಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಂಸ್ಕರಿಸಲ್ಪಟ್ಟ ಅದಿರಿನಲ್ಲಿ ಉಳಿದು ಕೊಂಡಿರುವ ಚಿನ್ನವನ್ನು ತೆಗೆಯುವುದಕ್ಕಾಗಿ ಸರಕಾರವು ಮುಂದಿನ ನಾಲ್ಕೈದು ತಿಂಗಳುಗಳಲ್ಲಿ ಬಿಡ್‌ಗಳನ್ನು ಆಹ್ವಾನಿ
ಸುವ ನಿರೀಕ್ಷೆಯಿದೆ ಎಂದವರು ಹೇಳಿದ್ದಾರೆ.
''ಸಂಸ್ಕರಿತ ಅದಿರಿನಿಂದ ಚಿನ್ನವನ್ನು ತೆಗೆಯುವ ತಂತ್ರಜ್ಞಾನ ಹಾಗೂ ಅನುಭವವು ವಿದೇಶಿ ಕಂಪೆನಿಗಳ ಬಳಿ ಮಾತ್ರವೇ ಇದೆಯೆಂಬುದು ನಮಗಿರುವ ಏಕೈಕ ಅಡೆತಡೆಯಾಗಿದೆ. ಆದರೆ ವಿದೇಶಿ ಕಂಪೆನಿಗಳು ಸ್ಥಳೀಯ ಕಂಪೆನಿಗಳ ಜೊತೆ ಕೈಜೋಡಿಸಬಹುದಾಗಿದೆ ಅಥವಾ ಉದ್ಯಮ ಒಕ್ಕೂಟವನ್ನು ಕೂಡಾ ರೂಪಿಸಬಹುದಾಗಿದೆ'' ಎಂದು ಅವರು ಹೇಳಿದ್ದಾರೆ. ಈ ವಿಷಯವಾಗಿ ಕೇಂದ್ರ ಗಣಿ ಸಚಿವಾಲಯವನ್ನು ಸುದ್ದಿಸಂಸ್ಥೆ ಸಂಪರ್ಕಿಸಿದ್ದರೂ, ತಕ್ಷಣವೇ ಅದು ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ತಿಳಿದುಬಂದಿದೆ.
ಚೀನಾದ ನಂತರ ಭಾರತವು ಜಗತ್ತಿನಲ್ಲೇ ಚಿನ್ನದ ಅತಿ ದೊಡ್ಡ ಗ್ರಾಹಕ ರಾಷ್ಟ್ರವಾಗಿದೆ. ಭಾರತವು ತನ್ನ ಬಹುತೇಕ ಚಿನ್ನದ ಬೇಡಿಕೆಯನ್ನು ಆಮದು ಮೂಲಕ ಈಡೇರಿಸಿಕೊಳ್ಳುತ್ತದೆ.
ಭಾರತದ ಚಿನ್ನದ ಬೇಡಿಕೆಯು ಸೆಪ್ಟಂಬರ್‌ನಲ್ಲಿ 191.7 ಟನ್‌ಗಳಿಗೆ ಏರಿದ್ದು, ಇದು ಕಳೆದ ವರ್ಷಕ್ಕಿಂತ ಶೇ.೧೪ರಷ್ಟು ಅಧಿಕವಾಗಿದೆ ಎಂದು ವಿಶ್ವ ಚಿನ್ನದ ಮಂಡಳಿ ವರದಿಯೊಂದರಲ್ಲಿ ತಿಳಿಸಿದೆ.