ಬದಿಯಡ್ಕ: ಪಡನ್ನಕ್ಕಾಡ್ ಕೃಷಿ ಕಾಲೇಜು ಹಾಗೂ ಕುಂಬ್ಡಾಜೆ ಗ್ರಾಮ ಪಂಚಾಯತಿ ಕೃಷಿ ಭವನದ ಸಂಯುಕ್ತ ಆಶ್ರಯದಲ್ಲಿ ಕೃಷಿ ಕೀಟ ನಿಯಂತ್ರಣ ಶಿಬಿರ ನಡೆಯಿತು.
ಕುಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸೋಳಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಟಿ.ಎಂ.ಅಬ್ದುಲ್ ರಝಾಕ್, ಕದೀಜಾ, ಸದಸ್ಯರಾದ ಮುಮ್ತಾಜ್, ಸುಹಾರಾ, ಜಿ.ಕೃಷ್ಣ ಶರ್ಮ, ಜೆ.ಸುನೀತಾ ರೈ, ಸುಂದರ ಮವ್ವಾರ್, ಆಯೇಷತ್ ಪಿ.ಮಷಿದಾ, ಕೃಷಿ ಅಧಿಕಾರಿ ಜೆ.ನಿಖಿತಾ, ಕೃಷಿ ಸಹಾಯಕರಾದ ವಿನೋದ್ ಕುಮಾರ್, ಪ್ರೀತಾ ಉಪಸ್ಥಿತರಿದ್ದರು. ಪಡನ್ನಕ್ಕಾಡ್ ಕೃಷಿ ಕಾಲೇಜಿನ ಪ್ರಾಧ್ಯಾಪಕರು ತರಗತಿಗಳನ್ನು ನಡೆಸಿಕೊಟ್ಟರು.
ಕೃಷಿ ಕೀಟ ನಿಯಂತ್ರಣ ಶಿಬಿರ
0
ಡಿಸೆಂಬರ್ 30, 2022
Tags